ಅಮೋಲ ಜನಕಲ್ಯಾಣ ಪ್ರತಿಷ್ಠಾನದಿಂದ ಸು.10 ಸಾವಿರ ಮನೆಗಳಿಗೆ ಪ್ರಸಾದ ಹಂಚಿಕೆ

ಕಾಗವಾಡ :ಸೆ.9: ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಶಿರಗುಪ್ಪಿ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಸುಮಾರು 10 ಸಾವಿರ ಮನೆಗಳಿಗೆ ತೆರಳಿ ಪ್ರಸಾದ ಹಂಚಿದ ಡಾ. ಅಮೋಲ ಸರಡೆ ಅವರನ್ನು ಶಿರಗುಪ್ಪಿ ಮರಗುಬಾಯಿ ದೇವಸ್ಥನ ಕಮೀಟಿ ವತಿಯಿಂದ ಸತ್ಕರಿಸಿ, ಸನ್ಮಾನಿಸಲಾಯಿತು.ವರ್ಷಕ್ಕೊಮ್ಮೆ ಜರುಗುವ ಮರುಗುಬಾಯಿ ಜಾತ್ರೆಯ ಅಂಗವಾಗಿ ದೇವಸ್ಥಾನ ಕಮೀಟಿಯ ವತಿಯಿಂದ ಡಾ. ಅಮೋಲ ಸರಡೆಯವರನ್ನು ಸತ್ಕರಿಸಲಾಯಿತು. ಮರುಗುಬಾಯಿ ಕಮೀಟಿಯ ಸದಸ್ಯರಾದ ಸದಾಶಿವ ಪೂಜಾರಿ ಮಾತನಾಡಿ ಡಾ. ಅಮೋಲ ಸರಡೆಯವರು ವೃತ್ತಿಯಲ್ಲಿ ವೈದ್ಯರಾಗಿದ್ದರು ಕೂಡ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ಭಾಗದಲ್ಲಿ ಅತ್ಯಂತ ಜನಪ್ರೀಯರಾಗಿದ್ದಾರೆ.
ರಾಜಕೀಯವಾಗಿ ವಿಶ್ವ ಹಿಂದೂ ಪರಿಷತ್ತ-ಬಜರಂಗದಳದ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ. ಅದರಂತೆ ಧಾರ್ಮಿಕ ಕಾರ್ಯಗಳಲ್ಲಿ ಅನೇಕ ವಿದಾಯಕ ಕಾರ್ಯಗಳನ್ನು ಕೈಗೊಂಡು ಸೈ ಎನಿಸಿಕೊಂಡಿದ್ದಾರೆ. ಪ್ರತಿವರ್ಷ ನೂರಾರು ಭಕ್ತರ ಜತೆಗೂಡಿ ಕಾಲ್ನಡಿಗೆಯ ಮೂಲಕ ಮಹಾರಾಷ್ಟ್ರದ ನಾಯಿಕಬಾ ದೇವರ ದರ್ಶನಕ್ಕೆ ತೆರಳಿ ಯುವಕರಲ್ಲಿ ಆಧ್ಯಾತ್ಮಿಕ ಭಾವನೆಯನ್ನು ವೃದ್ಧಿಸಿದ್ದಾರೆ. ಕೋವಿಡ್ ಸಮಯದಲ್ಲಿ ಕೂಡ ಕಾಗವಾಡ ತಾಲೂಕಿನ ಪ್ರತಿ ಮನೆ ಮನೆಗೆ ತೆರಳಿ ಮಾಸ್ಕ್, ಸ್ಯಾನಿಟೈಜರ್ ಕಿಟ್‍ಗಳನ್ನು ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಅಗಸ್ಟ್ 15 ರಂದು ಅಮೃತ ಮಹೋತ್ಸವದ ಅಂಗವಾಗಿ “ಘರ್ ಘರ್ ತಿರಂಗಾ ಪ್ರತಿ ಮನೆ ಮನೆಗೆ ಧ್ವಜಗಳನ್ನು ನೀಡಿ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ.
ಅವರ ಈ ಎಲ್ಲ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಸದಾಶಿವ ಪೂಜಾರಿ ಶುಭ ಹಾರೈಸಿದರು.
ಈ ಸಮಯದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಸುರೇಶ ಮೈಶಾಳೆ, ಉಪಾಧ್ಯಕ್ಷ ಬಾಳು ರೂಪನ್ನವರ, ಸದಸ್ಯರಾದ ಕಲ್ಲಪ್ಪ ಚಂದೂರೆ, ಮಹಾದೇವ ಢಂಗ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಅಣ್ಣಾಸಾಬ ಚಂದೂರೆ, ಅಜೀತ ಪೂಜಾರಿ, ಕಲ್ಲಪ್ಪ ಮೈಶಾಳೆ, ಬಾಳು ಧಾರವಾಡೆ, ಅಜೀತ ಮಿರ್ಜೆ, ರಾಜು ಪೂಜಾರಿ, ಕಾರ್ಯದರ್ಶಿ ಸುರೇಶ ಶಿರಗುಪ್ಪೆ, ಯುವಕ ಮಂಡಳದ ಸದಸ್ಯರಾದ ಮಾರುತಿ ಪೂಜಾರಿ, ಸಂದೀಪ ಮೊನೆ, ರಾಜು ಢಂಗ, ವಿಠ್ಠಲ ನರೋಟೆ, ಶ್ರೀವರ್ಧನ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.