ಅಮೋದ್ ನಾಯ್ಕ್ ರಾಜ್ಯಕ್ಕೆ ೪ನೇ ರ್‍ಯಾಂಕ್

ಬೆಂಗಳೂರು,ಏ.೧೬: ಡಿ.ಆರ್. ಅಕಾಡೆಮಿ, ಅಶೋಕ್ ಪಿ.ಯು ಕಾಲೇಜು ವಿದ್ಯಾರ್ಥಿ ಅಮೋದ್ ನಾಯ್ಕ್ ದ್ವಿತೀಯ ಪಿಯುಸಿಯಲ್ಲಿ ೫೯೫/೬೦೦ ಅಂಕಗಳನ್ನು ಗಳಿಸಿ ಬೆಂಗಳೂರು ಉತ್ತರದಲ್ಲಿ ೨ನೇ ರ್‍ಯಾಂಕ್ ಮತ್ತು ಇಡೀ ಕರ್ನಾಟಕ ರಾಜ್ಯಕ್ಕೆ ೪ನೇ ರ್‍ಯಾಂಕ್ ಗಳಿಸಿದ್ದಾರೆ.
ಕೆ.ಜಿ.ಹಳ್ಳಿಯ ಅಶೋಕ್ ಪಿಯು ಕಾಲೇಜಿನಲ್ಲಿರುವ ಕೆಸಿಇಟಿ, ನೀಟ್ ಮತ್ತು ಜೆಇಇ ಕೋಚಿಂಗ್‌ನ ಪ್ರಮುಖ ಸಂಸ್ಥೆಯಾದ ಡಿಆರ್ ಅಕಾಡೆಮಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಉತ್ತೀರ್ಣರಾಗಿದ್ದು, ೩೪೭ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. (೭೬.೭೬%), ೧೦೪ ವಿದ್ಯಾರ್ಥಿಗಳು ಪ್ರಥಮ ದರ್ಜೆಗಳನ್ನು ಪಡೆದುಕೊಂಡಿ ದ್ದಾರೆ. ಒಟ್ಟು ೪೫೨ ವಿದ್ಯಾರ್ಥಿಗಳ ಪೈಕಿ ೧ ದ್ವಿತೀಯ ಶ್ರೇಣಿ.
ಕವನಾ ೫೯೪ ಅಂಕ, ನಂದಿತಾ- ೫೯೧, ನವ್ಯಾ, ತೇಜಸ್ವಿನಿ ಮತ್ತು ಸ್ಪೂರ್ತಿ. ಆರ್ ೫೮೯ ಅಂಕಗಳನ್ನು ಪಡೆದಿದ್ದಾರೆ. ಡಿ.ಆರ್.ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪಿ.ದೇವೆಂದರ್ ರೆಡ್ಡಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.