ಅಮೋಘ ಆದರ್ಶ ವಿಕಲಚೇತನ ಟ್ರಸ್ಟ್‌ನ ಉದ್ಘಾಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಫೆ.೧೭: ನಗರದ ರೋಟರಿ ಕ್ಲಬ್‌ನಲ್ಲಿ ಈಚೆಗೆ ಅಮೋಘ ಆದರ್ಶ ವಿಕಲಚೇತನ ಟ್ರಸ್ಟ್‌ನ ಉದ್ಘಾಟನಾ ಸಮಾರಂಭವನ್ನು ಟ್ರಸ್ಟಿನ ಅಧ್ಯಕ್ಷ ಎ.ಹೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಸಮಾರಂಭದಲ್ಲಿ ಸೋಲೊಮನ್‌ರಾಜ್, ರಾಜಶೇಖರ್, ಎಂ. ವಿಜಯಲಕ್ಷ್ಮೀ ಪಾಟೀಲ್, ನಟರಾಜ್, ಎಂ. ಅಶ್ರಫ್ ಅಲಿ, ಮುಕುಂದಸಾರಬಿ, ತಿಪ್ಪೇಸ್ವಾಮಿ, ಎಂ. ಹೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.