ಅಮೇರಿಕಾದಲ್ಲಿ ೨೪ ಗಂಟೆಗಳಲ್ಲಿ ದಾಖಲೆ ಸೋಂಕು

ವಾಷಿಂಗ್ಟನ್, ಜ.೯- ಅಮೆರಿಕದಲ್ಲಿ ಕೊರೋನಾ ಸೋಂಕು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಳೆದ ೨೪ ಗಂಟೆಗಳಲ್ಲಿ ಸರಿಸುಮಾರು ಮೂರು ಲಕ್ಷ ಪ್ರಕರಣಗಳು ದಾಖಲಾಗಿವೆ.

ಕಳೆದೊಂದು ದಿನದಲ್ಲಿ ೨ ಲಕ್ಷ ೯೦ ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಇದುವರೆಗಿನ ದಾಖಲೆ ಪ್ರಮಾಣದ ಸೋಂಕು ಇದಾಗಿದೆ ಎಂದು ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಕಳೆದ ೨೪ ಗಂಟೆಗಳಲ್ಲಿ ೩೬೭೬ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿಯಲ್ಲಿ ತಿಳಿಸಿದೆ.ಮೊನ್ನೆಯಷ್ಟೇ ಒಂದೇ ದಿನ ನಾಲ್ಕು ಸಾವಿರ ಮಂದಿ ಸೋಂಕಿನಿಂದ ಮೃತಪಟ್ಟಿದ್ದರು.

ಈ ಪೈಕಿ ೧ಲಕ್ಷ ೩೧ ಸಾವಿರ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇಂದು ವಿಶ್ವವಿದ್ಯಾಲಯ ತಿಳಿಸಿದೆ.

ಅಮೆರಿಕದಲ್ಲಿ ಇದುವರೆಗೂ ಕೋರೋಣ ಸೋಂಕಿನಿಂದ ೨ ಕೋಟಿ ೧೮ ಲಕ್ಷ ಮಂದಿಗೆ ಸೋಂಕು ತಗಲಿದೆ. ಈವರೆಗೆ ೩.೬೮ ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

ಒಂದೆಡೆ ಕೊರೋನೋ ಸೋಂಕು ಹೆಚ್ಚಾಗುತ್ತಿದ್ದು ಮತ್ತೊಂದೆಡೆ ಇಂಗ್ಲೆಂಡಿನಿಂದ ಅಮೆರಿಕಕ್ಕೆ ಬಂದಿರುವ ಜನರಲ್ಲಿ ರೂಪಾಂತರ ಕಾಣಿಸಿಕೊಂಡಿರುವುದು ಅಮೆರಿಕ ಜನರನ್ನು ಮತ್ತಷ್ಟು ಆತಂಕಕ್ಕೆ ಸಿಗುವಂತೆ ಮಾಡಿದೆ.