ಅಮೇರಿಕಾದಲ್ಲಿಯೂ ಯುವ ರತ್ನ ಬಿಡುಗಡೆ

ಬೆಂಗಳೂರು, ಮಾ. ೨೬- ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ “ಯುವರತ್ನ” ಸಿನಿಮಾ ಅಮೆರಿಕಾದಲ್ಲೂ ಬಿಡುಗಡೆಗೆ ಸಜ್ಜಾಗಿದೆ.

ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ಏಪ್ರಿಲ್ ೧ ರಂದೇ ಚಿತ್ರ ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಿಡುಗಡೆ ಯಾಗಲಿದೆ.

ಏಪ್ರಿಲ್ ೧ ರಂದೇ ವೀಕೆಂಡ್ ಸಿನಿಮಾಸ್ ಸಂಸ್ಥೆ ಉತ್ತರ ಅಮೆರಿಕಾದಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

ಕರ್ನಾಟಕದಲ್ಲಿ ಸುಮಾರು ೪೦೦ ಚಿತ್ರಮಂದಿರಗಳಲ್ಲಿ ಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ೨೦೦ ಚಿತ್ರಮಂದಿರಗಳಲ್ಲಿ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ.

ರಾಜಕುಮಾರ ಚಿತ್ರದ ಬಹುದೊಡ್ಡ ಯಶಸ್ಸಿನ ನಂತರ ನಟ ಪುನೀತ್ ರಾಜಕುಮಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಿರ್ಮಾಪಕ ವಿಜಯ್ ಕಿರಂಗದೂರು ಜೊತೆಯಾಗಿ ಕೆಲಸ ಮಾಡುತ್ತಿರುವ ಚಿತ್ರ ಯುವರತ್ನ ಹೀಗಾಗಿ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಕಾತುರ ಹೆಚ್ಚಾಗಿದೆ.

ಕೊರೋನಾ ಸೋಂಕಿನಿಂದ ನನಗೆ ಹೋಗಿದ್ದು ಕನ್ನಡ ಚಿತ್ರರಂಗದ ಇತ್ತೀಚಿನ ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದೆ ಪೊಗರು ಮತ್ತು ಭಾವಚಿತ್ರಗಳು ಯಶಸ್ವಿಯಾಗಿದ್ದು ಚಿತ್ರದ ನಿರ್ಮಾಪಕರು ನಿರ್ದೇಶಕರು ಮತ್ತು ಆಶಾಭಾವನೆ ಮೂಡಿಸಿದೆ.