ಅಮೇರಿಕದ ಕಾನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯದ ಘಟಿಕೋತ್ಸವ ಅಮೋಘ ಶ್ರೀನಿವಾಸ ಸಿರನೂರಕರ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಕಲಬುರಗಿ,ಮೇ.12- ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಮ್ಯಾನ್‍ಹ್ಯಾಟನ್‍ನಲ್ಲಿ ಮೇ.10ರಂದು ಜರುಗಿದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಘಟಿಕೋತ್ಸವ ಸಮಾರಂಭದಲ್ಲಿ ಸಾಹಿತಿ, ಚಿಂತಕ ಹಾಗೂ ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್ ಅವರ ಪುತ್ರ ಅಮೋಘ್ ಸಿರನೂರಕರ್ ಅವರಿಗೆ ಡಾಕ್ಟರೆಟ್ ಪದವಿ ನೀಡಿ ಗೌರವಿಸಲಾಯಿತು.
ಅಮೋಘ್ ಸಿರನೂರಕರ್ ಅವರು, “ಭೌತಶಾಸ್ತ್ರದಲ್ಲಿ ಸಂವೇದನಾಶೀಲತೆಯನ್ನು ಉತ್ತೇಜಿಸುವ ಸಂಶೋಧನೆ ಆಧಾರಿತ ಮೌಲ್ಯಮಾಪನಗಳ ಅಭಿವೃದ್ಧಿ ಮತ್ತು ವಿಶ್ಲೇಷಣೆ”ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‍ಡಿ) ಪದವಿ ಲಬಿಸಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಕಳೆದ ಮೇ 10 ರಂದು. ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಡಾ. ಅಮೋಘ್ ಸಿರನೂರಕರ್ ಅವರ ಮಾರ್ಗದರ್ಶಿ ಡಾ.ಜೆಮ್ಸ್ ಲಾವರ್ಟಿ ಅವರೊಂದಿಗೆ ಶ್ರೀನಿವಾಸ ಸಿರನೂಕರಕ್, ಪತ್ನಿ ರೇಖಾ ಸಿರನೂರಕ್, ಸೊಸೆÉ ಸ್ನೇಹಾ ಅಮೋಘ್ ಸಿರನೂರಕರ್ ಅವರು ಈ ಅಪರೂಪದ ಘಟಿಕೋತ್ಸವ ಸಂಭ್ರಮಕ್ಕ್ಕೆ ಸಾಕ್ಷಿಯಾದರು.
ಅಮೇರಿಕಾ ರಾಷ್ಟ್ರವು ತಮ್ಮ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪಾಲಕರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲು ಅಮೆರಿಕದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಉದಾರವಾಗಿ ವೀಸಾಗಳನ್ನು ನೀಡುತ್ತಿರುವುದು ವಿಶೇಷವಾಗಿದೆ.