ಅಮೆರಿಕ ಜನಪ್ರತಿನಿಧಿಯಾಗಿ ೬ ಭಾರತೀಯರ ಆಯ್ಕೆ

ವಾಷಿಂಗ್ಟನ್, ನ. ೪- ಭಾರತೀಯ ಮೂಲದ ೬ ಮಂದಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ರಾಜ ಕೃಷ್ಣಮೂರ್ತಿ ಅವರು ಸತತ ಮೂರನೇ ಬಾರಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಯ್ಕೆಯಾಗಿದ್ದಾರೆ.
೪೭ ವರ್ಷದ ಕೃಷ್ಣಮೂರ್ತಿಯವರು ದೆಹಲಿಯಲ್ಲಿ ಜನಿಸಿದ್ದಾರೆ.
ಲಿಬರ್ಟಿ ಪಕ್ಷದ ಪ್ರೆಸ್ಟನ್ ನೆಲ್ಸ್‌ನ್ ಅವರನ್ನು ಪರಾಭವಗೊಳಿಸಿ ಮೂರನೇ ಬಾರಿಗೆ ಅಮೆರಿಕದ ಸಂಸತ್ತು ಪ್ರವೇಶಿಸಿದ್ದಾರೆ.
ತಮಿಳ್ನಾಡು ಮೂಲದ ರಾಜ ಕೃಷ್ಣಮೂರ್ತಿ ಕುಟುಂಬ ಅಮೆರಿಕದಲ್ಲಿ ವಾಸ ಮಾಡುತ್ತಿದ್ದಾರೆ.
ಅಮಿ ಬೆರಾ ಅವರು ಸತತ ಐದನೇ ಬಾರಿಗೆ ಕ್ಯಾಲಿಫೋರ್ನಿಯಾದಿಂದ ನನ್ನವರು ಮೂರನೇ ಬಾರಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪ್ರವೇಶ ಮಾಡಿದ್ದಾರೆ.
ಪ್ರಮೀಳಾ ಜಯಪಾಲ್ ಅವರು ಮೂರನೇ ಬಾರಿಗೆ ವಾಷಿಂಗ್ಟನ್ ರಾಜ್ಯದಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಯ್ಕೆಯಾಗಿದ್ದಾರೆ.
ಡಾ.ಹಿರಲ್ ತಿಪಿರ್ ನೆನಿ ಮೂರನೇ ಬಾರಿಗೆ ಆಯ್ಕೆಯಾಗಿದ್ದು ಶ್ರೀ ಕುಲಕರ್ಣಿ ಟೆಕ್ಸಾಸ್ ನಲ್ಲಿ ಭಾರಿ ಪೈಪೋಟಿ ನೀಡಿದ್ದಾರೆ.
ಮಂಗ ಅನಂತ ಮೂಲ ಅವರು ಕೂಡ ತೀವ್ರ ಪೈಪೋಟಿ ನೀಡುತ್ತಿದ್ದು ಅಂತಿಮವಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ
ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇನ್ನೂ ಹಲವು ಮಂದಿ ಭಾರತೀಯರು ಸ್ಪರ್ಧಾಕಣದಲ್ಲಿದ್ದಾರೆ ಗೆಲುವು ಸಾಧಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.