ಅಮೆರಿಕ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಮೃತಮತಿ ಆಯ್ಕೆ

ಬೆಂಗಳೂರು, ಸೆ.12- ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಯಶೋಧರ ಚರಿತೆ ” ಕಾವ್ಯ ಆದರಿಸಿದ “ಅಮೃತಮತಿ” ಚಿತ್ರ ಅಮೇರಿಕಾದ ಬೋಸ್ಟನ್ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಯಾಗಿದೆ.

13ನೇ ಶತಮಾನದ ಜನ್ನಕವಿ ಅವರ ಯಶೋಧರ ಚರಿತೆ ಕಾವ್ಯ ಪ್ರಸಂಗವನ್ನು ಆಧರಿಸಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು “ಅಮೃತಮತಿ” ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಪ್ರಪಂಚದ ವಿವಿಧ ದೇಶಗಳ ಚಿತ್ರಗಳ ಜೊತೆಗೆ ಭಾರತದ ಹೊಸ ಚಿತ್ರಗಳಿಗೆ ಹೆಚ್ಚು ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಚಿತ್ರೋತ್ಸವಕ್ಕೆ “ಇಂಡಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ” ಹೆಸರಿನಿಂದ ನಡೆಸುತ್ತಿರುವುದು ವಿಶೇಷ.

“ಅಮೃತಮತಿ” ಚಿತ್ರ ಈಗಾಗಲೇ ನೋಯಿಡಾ, ಆಸ್ಟ್ರಿಯಾ ಮತ್ತು ಅಟ್ಲಾಂಟಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಮೆಚ್ಚುಗೆ ಪಡೆದಿದೆ. ನೋಯ್ಡಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟನೆಗಾಗಿ ನಟಿ ಹರಿಪ್ರಿಯಾ ಅವರಿಗೆ ಪ್ರಶಸ್ತಿ ಬಂದಿತ್ತು.

ಚಿತ್ರದಲ್ಲಿ ಹರಿಪ್ರಿಯಾ ಅವರಲ್ಲದೆ ಬಹುಭಾಷಾ ನಟ ಕಿಶೋರ್, ಕಲಾವಿದರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ವತ್ಸಲಾ ಮೋಹನ್ ,ಸುಪ್ರಿಯ ರಾವ್, ಅಂಬರೀಶ್ ಸಾರಂಗಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.