ಅಮೆರಿಕಾ ೨ ಕೋಟಿ ಸನಿಹದಲ್ಲಿ ಸೋಂಕಿತರು

ವಾಷಿಂಗ್ಟನ್, ಡಿ.೨೮- ಅಮೆರಿಕದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದುವರೆಗೂ ಒಂದು ಕೋಟಿ ೯೦ ಲಕ್ಷ ದಾಟಿದೆ .
ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ಸಂಪನ್ಮೂಲ ಕೇಂದ್ರದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಕೊರೋನಾ ಪೀಡಿತರ ೧೯ ಮಿಲಿಯನ್ ಮೀರಿದೆ, ಆದರೆ ಸಾವಿನ ಸಂಖ್ಯೆ ೩ ಲಕ್ಷದ ೩೨,೭೦೫ ಕ್ಕಿಂತಲೂ ಹೆಚ್ಚಿದೆ ಎಂದು ಹೇಳಿದೆ.
ಕಳೆದ ೨೪ ಗಂಟೆಯಲ್ಲಿ ಹೊಸದಾಗಿ ಅಧಿಕ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ, ಈವರೆಗೆ ಚೇತರಿಕೆ ಪ್ರಯಾಣವೂ ವೇಗ ಪಡೆದುಕೊಂಡಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೊಸ ಅಂಕಿ ಅಂಶಗಳು ತಿಳಿಸಿವೆ.
ಅಮೆರಿಕ ಜಗತ್ತಿನಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿದ ದೇಶವಾಗಿದ್ದು ಜೊತೆಗೆ ವಿಶ್ವದ ಎಲ್ಲ ದೇಶಗಳಿಗಿಂತಲೂ ಹೆಚ್ಚು ಸಾವು-ನೋವು ಕಂಡ ದೇಶವಾಗಿದೆ.