ಅಮೆರಿಕಾ ಮೇಲೆ ಉ.ಕೊರಿಯಾ ಕೆಂಗಣ್ಣು

ಮಾಸ್ಕೋ, ಜ.೯- ಸದಾ ವಿವಾದದ ಸುಳಿಯಲ್ಲಿ ಸಿಲುಕುವ ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇದೀಗ ಅಮೆರಿಕಾ ವಿರುದ್ಧ ಗುಡುಗಿದ್ದು, ಅಮೆರಿಕಾ ದೇಶವೇ ನಮಗೆ ಅತಿದೊಡ್ಡ ಶತ್ರು ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಉತ್ತರ ಕೊರಿಯಾದ ಬಗ್ಗೆ ಅಮೆರಿಕದ ನೀತಿ ಬದಲಾಗುವುದಿಲ್ಲ ಮತ್ತು ಶ್ವೇತಭವನದಲ್ಲಿ ಯಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಲಿದ್ದಾರೆ ಎಂಬುದರ ಮೇಲೂ ಇದು ಅವಲಂಬಿತವಾಗಿಲ್ಲ ಎಂದು ನಾಯಕ ಕಿಮ್ ಹೇಳಿದ್ದಾರೆ.

ಇದೇ ಸಮಯದಲ್ಲಿ, ವಾಷಿಂಗ್ಟನ್ ಪ್ರತಿಕೂಲ ನೀತಿಯನ್ನು ತಿರಸ್ಕರಿಸುವುದೇ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಪ್ರಮುಖ ಅಂಶವಾಗಿದೆ ಎಂದು ಅವರು ಒತ್ತಿ ಹೇಳಿರುವುದಾಗಿ ವರದಿಯಾಗಿದೆ.