ಅಮೆರಿಕಾ ಜತೆ ಸಂಬಂಧ ವೃದ್ಧಿ ಪಿಂಗ್ ಪ್ರತಿಪಾದನೆ

ಬೀಜಿಂಗ್,ನ.೧೬- ಚೀನಾ ಮತ್ತು ಅಮೆರಿಕ ಸಹಬಾಳ್ವೆ, ಪರಸ್ಪರ ಗೌರವ, ಶಾಂತಿ ಮತ್ತು ಸಹಕಾರದೊಂದಿಗೆ ಹೆಜ್ಜೆ ಹಾಕಬೇಕಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.
ವರ್ಚುವಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸಂಬಂಧವೃದ್ಧಿ ವಿಚಾರದಲ್ಲಿ ಎರಡೂ ರಾಷ್ಟ್ರಗಳು ಸಕರಾತ್ಮಕ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಇದರಿಂದ ಚೀನಾ-ಭಾರತ ನಡುವೆ ಸ್ಥಿರ ಮತ್ತು ಉತ್ತಮ ಸಂಬಂಧ ವೃದ್ಧಿಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ವ್ಯಾಪಾರ, ಮಾನವಹಕ್ಕು, ದಕ್ಷಿಣ ಚೀನಾ ಸಮುದ್ರ ಹಾಗೂ ಥೈವಾನ್‌ನಂತಹ ವಿಷಯಗಳ ಬಗ್ಗೆ ಚೀನಾ ತೆಗೆದುಕೊಂಡ ಕ್ರಮಗಳಿಂದಾಗಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. ಇದರ ಬೆನ್ನಲ್ಲೆ ಮಹತ್ವದ ಶೃಂಗ ಸಭೆ ನಡೆದಿದೆ.
ಚೀನಾ ಹಾಗೂ ಅಮೆರಿಕ ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿವೆ. ಹೀಗಾಗಿ, ಸಂವಹನ ಮತ್ತು ಸಹಕಾರ ಬಲವರ್ಧನೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಜವಾಬ್ದಾರಿಗಳನ್ನು ಉಭಯ ದೇಶಗಳು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂಬ ಜಿಂಗ್ ಪಿಂಗ್ ಮತ್ತು ವಿಶ್ವಶಾಂತಿ ಮತ್ತು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಚೀನಾ-ಅಮೆರಿಕ ಒಟ್ಟಾಗಿ ಮುನ್ನಡೆಯಬೇಕಾಗಿದೆ ಎಂದರು.
ಸೆಪ್ಟೆಂಬರ್‌ನಲ್ಲಿ ಉಭಯ ನಾಯಕರ ನಡುವೆ ದೂರವಾಣಿ ಮೂಲಕ ಚರ್ಚೆ ನಡೆಸಿದ ನಂತರ ಇದೇ ಮೊದಲ ಬಾರಿಗೆ ವರ್ಚುವಲ್ ಶೃಂಗಸಭೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.