ಅಮೆರಿಕಾ ಗುಂಪಿನ ದಾಳಿ ೧೦ ಸಾವು

ಬೌಲ್ಡರ್, ಮಾ. ೨೪: ಅಮೆರಿಕದ ಕೊಲರಾಡೊ ಸೂಪರ್ ಮಾರ್ಕೆಟ್ ನಲ್ಲಿ ಆಗುಂತಕ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ ೧೦ ಮಂದಿ ಸಾವನ್ನಪ್ಪಿದ್ದಾರೆ.

ಅಮೆರಿಕದ ವಾಯವ್ಯ ರಾಜ್ಯದ ರಾಜಧಾನಿ ದೆನ್ವರ್ ನಿಂದ ೫೦ ಕಿಲೋಮೀಟರ್ ದೂರದಲ್ಲಿರುವ ಬೌಲ್ವರ್ ನಲ್ಲಿ ಗುಂಡಿನ ದಾಳಿ ನಡೆದಿದೆ. ವಿಶೇಷವಾಗಿ ಅತ್ಯಂತ ಜನನಿಬಿಡ ಪ್ರದೇಶವಾದ ಕೊಲರಾಡೊ ವಿಶ್ವವಿದ್ಯಾಲಯ ಸಮೀಪದ ಕಿಂಗ್ ಸೌಫರ್ಸ್ ಸ್ಟೋರ್ ನಲ್ಲಿ ದಾಳಿ ನಡೆದಿರುವುದು ತೀವ್ರ ಆತಂಕಕಾರಿಯಾಗಿದೆ.

ಅಮೆರಿಕ ಪಶ್ಚಿಮದ ರಾಜ್ಯದಲ್ಲಿ ನಡೆದ ಇತ್ತೀಚಿನ ಭೀಕರ ಗುಂಡಿನ ದಾಳಿ ಇದಾಗಿದೆ. ಘಟನೆ ಸಂಬಂಧ ಒಬ್ಬ ಶಂಕಿತ ಗಾಯಗೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಗುಂಡಿನ ದಾಳಿ ಎಸಗಿದವನ ಹೆಸರು ಅಥವಾ ಇನ್ನಿತರ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ ಎಂದು ಬೌಲ್ಡರ್ ಪೊಲೀಸ್ ಮುಖ್ಯಸ್ಥ ಮಾರಿಸ್ ಹೆರಾಲ್ಡ್ ತಿಳಿಸಿದ್ದಾರೆ.

ಈಗಾಗಲೇ ಘಟನೆಯ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿದ್ಧಾರೆ. ಇವರಲ್ಲಿ ಬೌಲ್ಬರ್ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ ಎಂದು ಹೇಳಲು ಇಚ್ಚಿಸುತ್ತೇವೆ ಎಂದು ಬೌಲ್ಡರ್ ಕೌಂಟಿ ಜಿಲ್ಲಾ ಅಟಾರ್ನಿ ಮೈಕೆಲ್ ಡೌಗರ್ಟಿ ಹೇಳಿದ್ದಾರೆ.

“ಈ ಗುಂಡಿನ ದಾಳಿ ಬೌಲ್ಡರ್ ಕೌಂಟಿಯ ಅತ್ಯಂತ ದುರಂತ ಮತ್ತು ದುಃಸ್ವಪ್ನವಾಗಿದೆ” ಎಂದು ಡೌಗರ್ಟಿ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ರೀತಿಯಿಂದಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಕಳೆದ ಮಾರ್ಚ್ ೧೬ರಂದು ನಡೆದ ಗುಂಡಿನ ದಾಳಿಯ ನಂತರ ಅಮೆರಿಕದಲ್ಲಿ ನಡೆದ ಈ ದಾಳಿ ಅತ್ಯಂತ ಭಯಾನಕ ಮತ್ತು ಸಾಮೂಹಿಕ ಹತ್ಯೆಇದಾಗಿದೆ. ಕಳೆದ ವರ್ಷ ದಾಳಿಗಳು ನಡೆದರೂ ಇಷ್ಟೊಂದು ಭೀಕರತೆ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.