ಅಮೆರಿಕಾದಲ್ಲಿ ರಜನಿಗೆ ಚಿಕಿತ್ಸೆ


ಚೆನ್ನೈ, ಜ.೨- ತಮಿಳು ಚಿತ್ರರಂಗದ ಖ್ಯಾತ ನಟ ಸೂಪರ ಸ್ಟಾರ್ ರಜನಿಕಾಂತ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ತೆರಳಿದ್ದಾರೆ.
ತಮಿಳರ ಪಾಲಿನ ತಲೈವಾ, ಭಾರತದ ಸಿನಿ ರಂಗದ ಅನಭಿಶಕ್ತ ದೊರೆಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಆ ಬಳಿಕ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದ್ದರು. ಈ ಮಧ್ಯೆ ರಕ್ತದೊತ್ತಡ ಏರುಪೇರಾಗಿದ್ದು, ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಹೊರ ಬಂದಿದ್ದರು.
ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ, ರಜನಿ ಮತ್ತೆ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಕೆಲ ವರ್ಷಗಳ ಹಿಂದೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದಾದ ಬಳಿಕ ರಜನಿಕಾಂತ್ ಅವರಿಗೆ ಆಗಾಗ ಆರೋಗ್ಯ ಸಮಸ್ಯೆ ಕಾಡುತ್ತಿದೆ.
ಅಂದಹಾಗೆ ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಬೇಕಿದ್ದ ತಲೈವಾಗೆ ಆರೋಗ್ಯ ಕೈಕೊಟ್ಟಿದೆ. ಇದು ಅವ್ರಿಗೆ ಅತೀವ ನೋವುಂಟು ಮಾಡಿದೆ. ಇದು ರಜನಿಕಾಂತ್ ಅಭಿಮಾನಿಗಳಿಗೂ ನೋವು ತಂದಿದೆ.