ಅಮೆರಿಕಾಕ್ಕೂ ಕಾಲಿಟ್ಟ ಬ್ರಿಟನ್ ಸೋಂಕು

ವಾಷಿಂಗ್ಟನ್, ಡಿ.೩೦-ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಜಗತ್ತಿನ ವಿವಿಧ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೀಗ ಅಮೇರಿಕಾದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.
ಕೊಲೊರಾಡೋದಲ್ಲಿ ಮೊದಲ ಸೋಂಕು ಕಾಣಿಸಿಕೊಂಡಿರುವುದಾಗಿ ಅಲ್ಲಿನ ರಾಜ್ಯಪಾಲ ಜರೆಡ್ ಪೋಲಿಸ್ ತಿಳಿಸಿದ್ದಾರೆ
ಇದುವರೆಗೂ ರೂಪಾಂತರ ಕೊರೊನಾ ಸೋಂಕು ಭಾರತ, ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್, ಸಿಂಗಪೂರ್ ಅಲ್ಲಲ್ಲಿ ಹೊಸ ಪ್ರಬೇಧದ ಸೋಂಕು ಪತ್ತೆಯಾಗಿದೆ.
ಕೋಲಾರದಲ್ಲಿ ಸೋಂಕು ಪತ್ತೆಯಾಗಿರುವುದನ್ನು ಅಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಂಗ್ಲೆಂಡಿನಿಂದ ೨೦ ವರ್ಷದ ಯುವಕನಿಗೆ ಕಾಣಿಸಿಕೊಂಡಿದೆ ಎಂದು ತಿಳಿಸಲಾಗಿದೆ.
ಸೋಂಕು ತನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ತಮ್ಮ ಆರೋಗ್ಯ ಕಡೆಗೆ ಕಾಳಜಿವಹಿಸಬೇಕು, ಮತ್ತೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೊಲೊರಾಡೋ ರಾಜ್ಯಪಾಲರು ಸೂಚಿಸಿದ್ದಾರೆ.
ಆತಂಕ ಅಗತ್ಯವಿಲ್ಲ:
ರೂಪಂತರ ಕೊರೊನಾ ಸೋಂಕು ಈ ಮುಂಚೆ ಕಾಣಿಸಿಕೊಂಡ ಸೋಂಕಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದ ವಿಜ್ಞಾನಿಗಳು ಇದೀಗ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸದ್ಯ ಲಭ್ಯವಿರುವ ಕೊರೊನಾ ಸೋಂಕಿನ ಲಸಿಕೆಯನ್ನು ಈ ಸೋಂಕಿಗೂ ಹಾಕಬಹುದಾಗಿದೆ ಎನ್ನುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಇಂಗ್ಲೆಂಡ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು ಈ ಮುಂಚೆ ಕಾಣಿಸಿಕೊಂಡ ಸೋಂಕಿಗಿಂತ ಹೆಚ್ಚು ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ.