ಅಮೆರಿಕದ ೬ ರಾಜ್ಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ವ್ಯಾಸಂಗ

ವಾಷಿಂಗ್ಟನ್,ಜ.೧೭-ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ೬ ರಾಜ್ಯದಲ್ಲಿ ಕಲಿಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಅಮೇರಿಕಾದ ನ್ಯೂಯಾರ್ಕ್, ಕ್ಯಾಲಿಫೊರ್ನಿಯಾ, ಟೆಕ್ಸಾಸ್, ಇಲಿನಾಯ್ಸ್, ಮ್ಯಾಸಚೂಸೆಟ್ಸ್ ಮತ್ತು ಅರಿಜೋನಾ ರಾಜ್ಯಗಳಲ್ಲಿ ಭಾರತದ ವಿದ್ಯಾರ್ಥಿಗಳು ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಈ ಆರು ರಾಜ್ಯಗಳಲ್ಲಿ ನೆಲೆಸಿರುವ ಸುಮಾರು ಅರ್ಧದಷ್ಟು ಭಾರತೀಯ ವಿದ್ಯಾರ್ಥಿಗಳು ನ್ಯೂಯಾರ್ಕ್‌ನಿಂದ ಕ್ಯಾಲಿಫೊರ್ನಿ ರಾಜ್ಯದ ವರೆಗೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ರಾಜ್ಯಗಳ ೧೨ ಉನ್ನತ ಶಿಕ್ಷಣ ಸಂಸ್ಥೆಗಳು ಅಗ್ರ ೧೦೦ ಶ್ರೇಯಾಂಕಗಳಲ್ಲಿ ಹೊಂದಿವೆ. ಇದೇ ಕಾರಣಕ್ಕಾಗಿ ಈ ೬ ರಾಜ್ಯಗಳಲ್ಲಿ ವ್ಯಾಸಂಗ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಅಮೇರಿಕಾದ ವಿವಿಧ ರಾಜ್ಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಸುಮಾರು ಅರ್ಧದಷ್ಟು ಭಾರತೀಯ ವಿದ್ಯಾರ್ಥಿಗಳು ಆರು ರಾಜ್ಯಗಳಲ್ಲಿ ಹರಡಿದ್ದಾರೆ. ಈ ರಾಜ್ಯಗಳಲ್ಲಿ ಅಮೇರಿಕಾದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ವಿದ್ಯಾಸಂಸ್ಥೆ ಹೊಂದಿವೆ ಎನ್ನವುದು ಸಮೀಕ್ಷೆಯಿಂದ ಬಯಲಾಗಿದೆ.
ಇತ್ತೀಚಿನ ಸುತ್ತಿನ ಶ್ರೇಯಾಂಕಗಳಲ್ಲಿ ಟಾಪ್ ೧೦೦ ರಲ್ಲಿ ೧೨ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆಯೋಜಿಸುತ್ತದೆ, ಓಪನ್ ಡೋರ್ಸ್ ನಡೆಸಿದ ಅಧ್ಯಯನದಿಂದ ಈ ವಿಷಯ ಬಹಿರಂಗಗೊಂಡಿದೆ.

ಶೇ.೫೨ ರಷ್ಟು ವಿದ್ಯಾರ್ಥಿಗಳು
ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಭಾರತ ಮತ್ತು ಚೀನಾದ ವಿದ್ಯಾರ್ಥಿಗಳ ಸಂಖ್ಯೆಯೇ ಅತ್ಯಧಿಕವಾಗಿದೆ ಎನ್ನುವ ಸಂಗತಿ ಬಯಲಾಗಿದೆ.
‘ಈ ಎರಡೂ ರಾಜ್ಯಗಳಲ್ಲಿ ಶೇ.೫೨ ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅಧ್ಯಯನ ಈ ವಿಷಯವನ್ನು ಹೊರಹಾಕಿದೆ.’ ಅದರಲ್ಲಿಯೂ ೬ ರಾಜ್ಯಗಳಲ್ಲಿ ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಕಲಿಕೆಗೆ ಆಸಕ್ತಿ ವಹಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.