ಅಮೆರಿಕದಿಂದ ದೆಹಲಿಗೆ ಬಂದಿಳಿದ 328 ಆಕ್ಸಿಜನ್ ಪೂರೈಕೆ ಪರಿಕರ

ನವದೆಹಲಿ, ಏ.26- ನ್ಯೂಯಾರ್ಕ್ ನಿಂದ 328 ಆಕ್ಸಿಜನ್ ಪೂರೈಕೆ ಪರಿಕರವನ್ನು ಏರ್ ಇಂಡಿಯಾ ಹೊತ್ತು ತಂದಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್‌ ಪರಿಸ್ಥಿತಿ ಎದುರಿಸುವ ಸಂದರ್ಭವನ್ನು ಬಲಪಡಿಸುವ ಯತ್ನ ನಡೆದಿದೆ. 328 ಫಿಲಿಪ್ಸ್‌ ಆಕ್ಸಿಜನ್‌ ಕಾನ್‌ ಸೆನ್‌ಟ್ರಾಟರ್ಸ್‌ ಅನ್ನು ಹೊತ್ತ ಏರ್‌ ಇಂಡಿಯಾ ವಿಮಾನ ನವದೆಹಲಿ ತಲುಪಿದೆ ಎಂದು ತಿಳಿಸಿದರು.
ತುರ್ತು ಸಂದರ್ಭದ ಪೂರೈಕೆಯ ನಂತರವೂ ವಿವಿಧ ಆಸ್ಪತ್ರೆಗಳು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿವೆ. ಶನಿವಾರ ಇಲ್ಲಿನ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಸುಮಾರು 20 ಜನರು ಆಮ್ಲಜನಕ ಕೊರತೆಯಿಂದಲೇ ಮೃತಪಟ್ಟಿದ್ದರು.
ದೇಶಾದ್ಯಂತ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಐಸಿಯು ದಾಖಲಾಗುತ್ತಿದ್ದು ಬಹುತೇಕ ಮಂದಿಗೆ ಆಕ್ಸಿಜನ್ ಕೊರತೆ ಎದುರಾಗಿದೆ. ಈ‌‌‌ ಹಿನ್ನಲೆಯಲ್ಲಿ ಅಮೆರಿಕ 5000 ಟನ್ ಆಕ್ಸಿಜನ್ ಭಾರತಕ್ಕೆ ರವಾನಿಸಿತ್ತು.