ಅಮೆರಿಕದಲ್ಲ್ಲಿ ಕಾಡ್ಗಿಚ್ಚು ೧೦ ಸಾವು

ಸ್ಯಾನ್ ಫ್ರಾನ್ಸಿಸ್ಕೋ, ಸೆ ೧೪ – ಅಮೆರಿಕದ ರಾಜ್ಯ ಒರೆಗಾನ್ ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ೧೦ ಜನರು ಸಾವನ್ನಪ್ಪಿದ್ದು, , ನೂರಾರು ಜನರು ಮನೆ-ಮಠ ಕಳೆದುಕೊಂಡಿದ್ದಾರೆ.
ಬೆಂಕಿಯು ಒರೆಗಾನ್‌ನಾದ್ಯಂತ ೧ ದಶಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಆವರಿಸಿದೆ, ಇದು ದಕ್ಷಿಣ ಗಡಿಯಿಂದ ಕರಾವಳಿ ಮತ್ತು ಕ್ಲಾಕಮಾಸ್ ಕೌಂಟಿಯವರೆಗೆ ವ್ಯಾಪಿಸಿದೆ. ಈ ಅಂಕಿ ಅಂಶವು ಕಳೆದ ೧೦ ವರ್ಷಗಳ ವಾರ್ಷಿಕ ಸರಾಸರಿಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ .
೪೦,ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆ-ಮಠ ತೊರೆದಿದ್ದಾರೆ. ಕಾಣೆಯಾದ ೫೦ ಜನರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರನ್ನು ಪತ್ತೆ ಮಾಡಲಾಗಿದೆ ಎಂದು ಜಾಕ್ಸನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ಅಮೆರಿಕ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ರಾಜ್ಯದ ಅತಿದೊಡ್ಡ ನಗರವಾದ ಪೋರ್ಟ್ಲ್ಯಾಂಡ್ ನಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದೂ ವರದಿಯಾಗಿದೆ.