ಅಮೆರಿಕದಲ್ಲಿ ೨.೫ ಲಕ್ಷ ಮಂದಿ ಕೊರೊನಾಗೆ ಬಲಿ

ವಾಷಿಂಗ್ಟನ್, ನ.೧೯- ಅಮೆರಿಕದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಇವರೆಗೆ ಮೃತಪಟ್ಟವರ ಸಂಖ್ಯೆ ೨ ಲಕ್ಷದ ೫೦ ಸಾವಿರ ಗಡಿದಾಟಿದೆ.
ವಿಶ್ವದಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಅಮೆರಿಕವೊಂದರಲ್ಲೇ ಸಂಭವಿಸಿದೆ. ಇತ್ತೀಚಿನ ದಿನದಲ್ಲಿ ಪ್ರತಿದಿನ ಸಾವಿರಾರು ಮಂದಿಗೆ ಅಮೆರಿಕದಲ್ಲಿ ಸೋಂಕು ತಗುಲುತ್ತದೆ.
ಕಳೆದ ೨೪ ಗಂಟೆಗಳಲ್ಲಿ ೭೮,೬೩೦ ಮಂದಿಗೆ ಹೊಸ ಪ್ರಕರಣಗಳು ದಾಖಲಾಗಿದ್ದು ಇದುವರೆಗಿನ ಅತಿ ಹೆಚ್ಚು ಸೋಲಿನ ಪ್ರಕರಣಗಳಾಗಿವೆ.
ಅಮೆರಿಕ ಚುನಾವಣೆಯ ಬಳಿಕ ಸೋಂಕು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.
ಚುನಾವಣೆಯಲ್ಲಿ ಪರಾಭವಗೊಂಡಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರ್ವಹಣೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾಯಿತ ಅಧ್ಯಕ್ಷ ಬೈಡೆನ್ ಅವರಿಗೆ ಹೊಸ ತಲೆನೋವು ಎದುರಾಗಿದೆ.
ಅಮೆರಿಕಾ ಹೊರತುಪಡಿಸಿದರೆ ಭಾರತ ,ಬ್ರೆಜಿಲ್ ಫ್ರಾನ್ಸ್, ರಷ್ಯಾ, ಸ್ಪೇನ್, ಇಂಗ್ಲೆಂಡ್, ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಸಾವು ಮತ್ತು ಸ್ವತ್ತಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ
೫.೬೫ ಕೋಟಿ ಸೋಂಕು
ವಿಶ್ವದಲ್ಲಿ ಇರುವರೆಗೂ ೫ ಕೋಟಿ ೬೫ ಲಕ್ಷದ ೬೩ ಸಾವಿರದ ೮೦೨ ಮಂದಿಗೆ ಸೋಂಕು ತಗಲಿದೆ.
ಈ ಪೈಕಿ ೧೩ ಲಕ್ಷದ ೫೪ ಸಾವಿರದ ೮೦೨ ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಇದುವರೆಗೂ ಜಗತ್ತಿನಲ್ಲಿ ೩ ಕೋಟಿ ೯೩ ಲಕ್ಷದ ೫೨ ಸಾವಿರದ ೨೪೧ ಮಂದಿ ಚೇತರಿಸಿಕೊಂಡಿದ್ದಾರೆ.
ಸದ್ಯ ವಿಶ್ವದಲ್ಲಿ ೧ ಕೋಟಿ ೫೮ ಲಕ್ಷದ ೫೬ ಸಾವಿರದ ೭೫೯ ಮಂದಿ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಅಮೆರಿಕವೊಂದರಲ್ಲೇ ೧ ಕೋಟಿ ೧೮ ಲಕ್ಷದ ೭೩ ಸಾವಿರದ ೭೨೭ ಮಂದಿಗೆ ಸೋಂಕು ತಗುಲಿದ್ದು, ೨.೫೬ ಲಕ್ಷ ಮಂದಿ ಮೃತಪಟ್ಟಿದ್ದಾರೆ.