ಅಮೆರಿಕದಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ ಏರಿಕೆ

ಮುಂಬೈ,ಏ.೧೩- ಅಮೆರಿಕಾದಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ ೨೦೧೦ ರಿಂದ ೨೦೨೨ ರವರೆಗೆ ಶೇಕಡಾ ೧೫.೬ ರಷ್ಟು ಹೆಚ್ಚಾಗಿದೆ ಎಂದು ಅಮೆರಿಕಾದ ಅಂಕಿ ಅಂಶಗಳು ತಿಳಿಸಿವೆ.

೧೨ ವರ್ಷಗಳ ಅವಧಿಯಲ್ಲಿ ವಿದೇಶಿಯರ ಸಂಖ್ಯೆ ೪೬.೨ ದಶಲಕ್ಷ ಮಂದಿ ಎಂದು ಅಂದಾಜಿಸಲಾಗಿದೆ. ೨೦೨೨ ರಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ೧೩.೯ ರಷ್ಟು ಹೆಚ್ಚಾಗಿದೆ. ೨೦೧೦ ರಲ್ಲಿ, ವಿದೇಶಿ ಮೂಲದ ಜನಸಂಖ್ಯೆ ೪೦ ದಶಲಕ್ಷ ಮಂದಿ ಇದ್ದರು, ಇದೀಗ ಅವರ ಸಂಖ್ಯೆ ಶೇಕಡಾ ೧೨.೯ ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.

‘ದಿ ಫಾರಿನ್ ಬಾರ್ನ್ ಪಾಪ್ಯುಲೇಷನ್ ಇನ್ ದಿ ಯುಎಸ್: ೨೦೨೨’ ಎಂಬ ವರದಿಯಲ್ಲಿ ಅಮೆರಿಕಾದಲ್ಲಿ ವಿದೇಶಿ ಜನಸಂಖ್ಯೆ ಹೆಚ್ಚುತ್ತಿರುವ ವರದಿಯ ಬಗ್ಗೆ ಮಾಹಿತಿ ನೀಡಿದೆ.

೧೯೭೦ ರ ಅಂಕಿ ಅಂಶಗಳ ಪ್ರಕಾರ ವಿದೇಶದಲ್ಲಿ ಜನಿಸಿದ ಜನಸಂಖ್ಯೆ ಶೇಕಡಾ ೯.೬ ರಷ್ಟಿದೆ. ಹೀಗಾಗಿ ಅಮೇರಿಕಾ ವಲಸಿಗರ ರಾಷ್ಟ್ರ ಎನ್ನುವ ಹಿರಿಮೆಗೆ ಪಾತ್ರವಾಗುತ್ತಿದೆ

ಈ ವರ್ಷ ನವಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಪೂರ್ವದಲ್ಲಿ ವಲಸೆ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅಮೆರಿಕಾ ಮತ್ತು ಮೆಕ್ಸಿಕೋ ಗಡಿ ಸಮಸ್ಯೆ ಎರಡು ರಾಜಕೀಯ ಪಕ್ಷಗಳ ನಡುವೆ ಸಾಕಷ್ಟು ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ

ಭಾರತ ಮತ್ತು ಚೀನಾ ಒಳಗೊಂಡಿರುವ ವಿದೇಶಿ ಜನ ಜನಸಂಖ್ಯೆ ಅಮೆರಿಕಾದಲ್ಲಿ ಎರಡನೇ ಅತಿದೊಡ್ಡ ಸಂಖ್ಯೆ ಹೊಂದಿದೆ ೨೦೧೦ ರಲ್ಲಿ ೧೧.೨೮ ದಶಲಕ್ಷ ಇತ್ತು ಮತ್ತು ೨೦೨೨ ರಲ್ಲಿ ೧೪.೩೫ ದಶಲಕ್ಷಕ್ಕೆ ಏರಿಕೆಯಾಗಿದ್ದು ಒಟ್ಟಾರೆ ೨೭ ಶೇಕಡಾ ಹೆಚ್ಚಾಗಿದೆ.

ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಮೂಲದ ಜನರು ಕೂಡ ಅಮೆರಿಕಾದಲ್ಲಿ ಹೆಚ್ಚಾಗುತ್ತಿದ್ದಾರೆ. ವಿದೇಶಿ ಮೂಲದ ಜನಸಂಖ್ಯೆ ಶೇಕಡಾ ೯.೫ ಪ್ರತಿಶತದಷ್ಟು ಹೆಚ್ಚಿದ್ದು ೨೦೨೦ ರಲ್ಲಿ ೨೩.೨೩ ದಶಲಕ್ಷಕ್ಕೆ ತಲುಪಿದೆ.

’ವಿದೇಶಿ ಸಂಜಾತ’ ಎಂಬ ಪದವು ಅಮೆರಿಕಾದಲ್ಲಿ ವಾಸಿಸುವ ವಿದೇಶಿಯ ಸೂಚಕವಾಗಿದೆ. ಅವರು ಹುಟ್ಟಿನಿಂದ ಅಮೇರಿಕಾದ ಪ್ರಜೆಯಾಗಿರದೆ ನಂತರ ಅಮೇರಿಕಾದ ಪೌರತ್ವ ಪಡೆದವರಾಗಿದ್ದಾರೆ

ಗ್ರೀನ್ ಕಾರ್ಡ್ ಹೊಂದಿರುವವರು, ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ತಾತ್ಕಾಲಿಕ ವಲಸಿಗರು, ನಿರಾಶ್ರಿತರು ಮತ್ತು ಆಶ್ರಯ ಪಡೆದವರು ಮತ್ತು ಅನಧಿಕೃತ ವಲಸಿಗರನ್ನು ಸಹ ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ