ಅಮೃತ ಸರೋವರ ಯೋಜನೆಯಡಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ:ಜಿಪಂ ಉಪಕಾರ್ಯದರ್ಶಿ ಬಿ.ಎಸ್ ರಾಠೋಡ್

ಸೇಡಂ, ಜು,16: ತಾಲೂಕಿನ ಕುರುಕುಂಟಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ “ಅಮೃತ ಸರೋವರ ಯೋಜನೆಯಡಿ” ಉದ್ಯೋಗ ಖಾತರಿಯಲ್ಲಿ ನಡೆಯುತ್ತಿರುವ ಹೊಸ ಕೆರೆ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಬಿ.ಎಸ್ ರಾಠೋಡ್ ರವರು ಭೇಟಿ ನೀಡಿ ಪರಿಶೀಲಿಸಿದರು ತಾಲೂಕು ಅಧಿಕಾರಿಗಳಿಗೆ ಕೆರೆಯ ನಿರ್ಮಾಣಕ್ಕೆ ಕೆಲವು ಸಲಹೆಗಳನ್ನು ನೀಡಿದ ಅವರು ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸುವುದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಸನಗಳನ್ನು ನಿರ್ಮಿಸಲು ಸೂಚಿಸಿದರು ಹಾಗೂ ಕೆರೆಯ ಕಡತಗಳನ್ನು ಪರಿಶೀಲಿಸಿದರು. ಉದ್ಯೋಗ ಖಾತರಿಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಹೇಳಿದರು.
ಈ ವೇಳೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವಿಜಯಕುಮಾರ ಹಾಗೂ ಪಂಚಾಯತ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಣಮಂತಪ್ಪ ನರೇಗಾ ಸಹಾಯಕ ನಿರ್ದೇಶಕರಾದ ಅನೀಲ್ ಕುಮಾರ್ ಮಾನ್ಪಡೆ, ಗ್ರಾಮ ಪಂಚಾಯನ ಅಧ್ಯಕ್ಷರಾದ ಶ್ರೀಮತಿ ಲಲಿತಾ ತುಳಸೀರಾಂ ಮತ್ತು ಉಪಾಧ್ಯಕ್ಷರಾದ ಶ್ರೀ ಸಂಗಪ್ಪ ಕುಂಬಾರ, ಪಿಡಿಓ ಮಹ್ಮದ್ ಅಜ್ಮೀರ್

ಶ್ರೀ ಸಂಜೀವ ಖಂಡ್ರೆ,ಸಂಜೀವ ಕುಲಕರ್ಣಿ ಟಿ.ಸಿ ರಾದ ಶ್ರೀ ಅಶೋಕ, ಟಿ.ಎ.ಇ. ಸಿಂದಬಾದ. ಆಸೀಫ್ ಪಟೇಲ್. ಶ್ರೀ ಶಿವಸಾಗರ್, ಟಿ.ಐ.ಸಿ ಶ್ರೀ ಸಂತೋಷ ಪಾಟೀಲ್ ಬಿ.ಎಫ್.ಟಿ ಶ್ರೀ ಅರವಿಂದ ಸ್ವಾಮಿ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಸ್ವಾಮಿ ಇನ್ನಿತರರಿದ್ದರು.

ತಾಲೂಕಿನಲ್ಲಿ 10 ಕೆರೆಗಳ ನಿರ್ಮಾಣದಿಂದ ನೀರಿನ ಮಟ್ಟ ಹೆಚ್ಚಳವಾಗುವುದರ ಜೊತೆಗೆ ಸುತ್ತಮುತ್ತಲಿನ ರೈತರಿಗೆ ತೋಟಗಾರಿಕೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.

ವಿಜಯಕುಮಾರ್ ಯಾದಗೀರ
ತಾಲೂಕ ಪಂಚಾಯತ್

ಕಾರ್ಯನಿರ್ವಾಹಕ ಅಧಿಕಾರಿಗಳು ಸೇಡಂ

ಅಮೃತ ಸರೋವರ ಯೋಜನೆಯಡಿ ಹೊಸ ಕೆರೆ ನಿರ್ಮಾಣ ಕಾಮಗಾರಿಯನ್ನು ತಾಲೂಕಿನಲ್ಲಿ 10 ಮಾಡುವ ಉದ್ದೇಶವಿದ್ದು ಮಹಾತ್ಮ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬ ಕಾರ್ಮಿಕರಿಗೂ ಕೆಲಸ ನೀಡುವುದರ ಜೊತೆಗೆ ಅವರ ಬದುಕಿಗೆ ಆಸರೆಯಾಗುತ್ತಿದೆ ನರೇಗಾ.

ಅನೀಲಕುಮಾರ್ ಮಾನ್ಪಡೆ,
ನರೇಗಾ ಸಹಾಯಕ ನಿರ್ದೇಶಕರು ಸೇಡಂ