ಅಮೃತ ಸರೋವರ ಫಲಕ ಉದ್ಘಾಟನೆ, ಯೋಧರಿಗೆ ಸನ್ಮಾನ

ಕೋಲಾರ, ಆ. ೧೭-ತಾಲ್ಲೂಕಿನ ಸೂಲೂರು ಗ್ರಾಪಂನಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂದಟ್ಟಿ ಅಮೃತ ಸರೋವರ ಕೆರೆ ಬಳಿ ಗ್ರಾ.ಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಧ್ವಜಾರೋಹಣ ನೆರವೇರಿಸಿದ್ದು, ಸಂಸದ ಎಸ್.ಮುನಿಸ್ವಾಮಿ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಅಮೃತ ಸರೋವರ ಶಿಲಾಫಲಕ ಉದ್ಘಾಟಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶಿಲಾಫಲಕ ಸ್ಥಾಪಿಸುವ ಮೂಲಕ ಕೆರೆಗಳನ್ನು ಉಳಿಸಲು ಸಂಕಲ್ಪ ಮಾಡೋಣ, ನಮ್ಮ ದೇಶದ ಗಡಿಯಲ್ಲಿ ಕೆಲಸ ಮಾಡಿದ ಯೋಧರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಶ್ರೇಷ್ಠ ಕೆಲಸ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೆಸಿ ವ್ಯಾಲಿ ನೀರಿನಿಂದಾಗಿ ಇಂದು ಮಳೆ ಬಾರದಿದ್ದರೂ ಜಿಲ್ಲೆಯ ಕೆರೆಗಳಲ್ಲಿ ನೀರು ಇರುವುದರಿಂದ ಬರದ ಸಂಕಷ್ಟ ಜಿಲ್ಲೆಯಿಂದ ದೂರವಾಗಿದೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ರೂಪ ವಿಜಯ್, ಸದಸ್ಯರಾದ ಕೆಂದಟ್ಟಿ ಎಂ.ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮುನಿರಾಜು, ನಾರಾಯಣಸ್ವಾಮಿ.ಎಂ, ಆದಿಮೂರ್ತಿ, ಸಿಕಂದರ್ ಪಾಷಾ, ಮುನಿರೆಡ್ಡಿ, ಜಗದೀಶ್, ತಲಗುಂದ ವೆಂಕಟೇಶಪ್ಪ, ಪಿಡಿಒ ಬಾಲಾಜಿ, ಕಾರ್ಯದರ್ಶಿ ಶ್ರೀನಿವಾಸ್, ಪ್ರದೀಪ್ ಕುಮಾರ್, ನರೇಗಾ ಇಂಜಿನಿಯರ್ ಶಶಿಕುಮಾರ್ ಇದ್ದರು
ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕೆಂದಟ್ಟಿ ಕುಮಾರ್ ಹಾಗೂ ಮುರಳಿರನ್ನು ಸನ್ಮಾನಿಸಲಾಯಿತು