ಅಮೃತ ಸರೋವರಗಳು ಕಾಲಮಿತಿಯಲ್ಲಿಯೇ ಪೂರ್ಣಗೊಳಿಸಲು ಸೂಚನೆ

ಕಲಬುರಗಿ,ಜು.13: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರವು ಕಲಬುರಗಿ ಜಿಲ್ಲೆಯಲ್ಲಿ 75 “ಅಮೃತ ಸರೋವರ” ಕೆರೆಗಳನ್ನು ನಿರ್ಮಿಸಲು ನಿರ್ಧರಿಸಿರುವ‌ ಕಾರಣ ಕಾಲಮಿತಿಯಲ್ಲಿಯೇ ಯೋಜನೆ ಪೂರ್ಣಗೊಲಿಸಬೇಕೆಂದು ಸಂಸದ ಡಾ.ಉಮೇಸ ಜಾಧವ ಅವರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಜಿ.ಪಂ. ಕಚೇರಿಯಲ್ಲಿ ಜರುಗಿದ ಜಿಲ್ಲೆಯ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ‌ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೆ ಸ್ಥಳ‌ ಗುರುತಿಸಿದ್ದು, ನಿರ್ಮಾಣ‌ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

ಸಭೆಯಲ್ಲಿ ಜಿ.ಪಂ. ಸಿ.ಇ.ಓ ಡಾ.ಗಿರೀಶ್ ಡಿ.‌ಬದೋಲೆ ಇದ್ದರು