ಅಮೃತ ಮಹೋತ್ಸವ ವರ್ಷ ಪೂರ್ತಿ ಆಚರಣೆ ಮಾಡಿ

ಬೀದರ್: ಆ.1:ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಗರದ ಮೈಲೂರ್ ಕ್ರಾಸ್‍ನ ಉಡುಪಿ ಕೃಷ್ಣ ಹೋಟೆಲ್ ಸಭಾಂಗಣದಲ್ಲಿ ಭಾರತಾಂಬೆಯ ಭಾವಚಿತ್ರ ಹಾಗೂ 75 ವರ್ಷದ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಕುಮಾರ ಬಿರಾದಾರ ಮಾತನಾಡಿ,’ಅಮೃತ ಮಹೋತ್ಸವವನ್ನು ವರ್ಷಪೂರ್ತಿ ಆಚರಣೆ ಮಾಡಬೇಕು’ ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಬಸವರಾಜ ಸ್ವಾಮಿ ಹೆಡಗಾಪುರಕರ್, ರಾಜಶೇಖರ ಮಂಗಲಗಿ, ಉಮಾಕಾಂತ ಮೀಸೆ, ಸಂಜೀವಕುಮಾರ ಸ್ವಾಮಿ, ರಮೇಶ ಪಾಟೀಲ, ಶಾಲಿವಾನ ಗಂದಗೆ, ಬಾಲಾಜಿ ಪವಾರ, ರಘುನಾಥ ಭುರೆ, ಮನೋಹರ ಭವರಾ, ರಾಜಕುಮಾರ ಬೇಲೂರೆ, ಸತೀಶ ಬಿರಾದಾರ, ಪರಮೇಶ್ವರ ಬಿರಾದಾರ, ಶಂಕರ ಬಾಪುರೆ, ಪ್ರತಾಪಸಿಂಗ್ ಜಾಧವ, ಸಂತೋಷಕುಮಾರ ಮಂಗಳೂರೆ ಹಾಗೂ ಮಲ್ಲಿಕಾರ್ಜುನ ಬಿರಾದಾರ ಇದ್ದರು.