ಅಮೃತ ಮಹೋತ್ಸವ : ಧರ್ಮ ಜಾಗೃತಿ ಸಭೆ

ಬೈಲಹೊಂಗಲ-ಮುರಗೋಡ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಕಾರಿ ವೇದಾಂತಾಚಾರ್ಯ ಪದವಿ ಸಂಪನ್ನರಾದ ಪೂಜ್ಯ ನೀಲಕಂಠ ಮಹಾಸ್ವಾಮೀಜಿ ಅವರ 75 ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವÀ ಸಮಾರಂಭವನ್ನು 2023 ಮಾರ್ಚ 1 ರಿಂದ 3 ವರೆಗೆ ನಾಡಿನ ಮಠಾಧೀಶರು, ಸದ್ಭಕ್ತರು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ನಾಡಿನ 75 ಪಟ್ಟಣ, ಹಳ್ಳಿಗಳಲ್ಲಿ ಶ್ರೀಗಳÀ ಸಮ್ಮುಖದಲ್ಲಿ ಮೂಲಕ ಧರ್ಮ ಜಾಗೃತಿ ಸಭೆಗಳು ಜರುಗಲಿವೆ. ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಪೂಜ್ಯ ಒಪ್ಪತೇಶ್ವರ ಸ್ವಾಮೀಜಿ ಹೇಳಿದರು.
ಅವರು ಶ್ರೀಮಠದಲ್ಲಿ ಅಮೃತ ಮಹೋತ್ಸವದ ಬ್ಯಾನರ್, ಪೆÇಸ್ಟರ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ, ಮಾತನಾಡಿ, ಶ್ರೀ ನೀಲಕಂಠ ಸ್ವಾಮೀಜಿ ಅವರ ಅಮೃತ ಮಹೋತ್ಸವದ ಅಂಗವಾಗಿ 2023 ಜ.19 ರಿಂದ ಫೆ.28 ವರೆಗೆ 41 ದಿನಗಳ ಕಾಲ ಶ್ರೀಮಠದಲ್ಲಿ ಬಸವ ಪುರಾಣ ಜರುಗಲಿದೆ.
ಕಾರ್ಯಕ್ರಮದ ದಿನಗಳಲ್ಲಿ ಬಸವ ಪುರಾಣ, ಮಹಾಂತ ಪುರಾಣ, ಗುರು ವಿರಕ್ತರ ಸಮಾಗಮ, ಮಂಟಪ ಪೂಜಾ, ನೀಲಕಂಠ ಸ್ವಾಮೀಜಿ ಅವರ 75 ತುಲಾಭಾರ ಸೇವೆ, 75 ಸರ್ವಧರ್ಮ ಸಾಮೂಹಿಕ ವಿವಾಹಗಳು, ಮಹಾಂತೇಶ ಗುರುಭವನ ಕಟ್ಟಡ ಭೂಮಿ ಪೂಜೆ, ಮಠದ ಬೆಳವಣಿಗೆಯ ಸ್ಮರಣ ಸಂಚಿಕೆ ಹಮ್ಮಿಕೊಂಡು ನಾಡಿನ ಭಕ್ತರಲ್ಲಿ ಆದ್ಯಾತ್ಮಿಕತೆ ಬಿತ್ತಿ ಶಾಂತಿ ನೆಲೆಸುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶ್ರೀಗಳ ಅಮೃತ ಮಹೋತ್ಸವದ ನಿಮಿತ್ತ ಮಾರ್ಚ1 ರಂದು ಶ್ರೀಮಠದ ಹಳೆಯ ವಿದ್ಯಾರ್ಥಿಗಳಿಂದ ಹಿಡಿದು ಕಲಿಕೆಯಲ್ಲಿರುವ ಸಂಸ್ಕøತ ಪಾಠ ಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಸಮಾವೇಶ ಮತ್ತು ರಾಜ್ಯ ಮಟ್ಟದ ಮಹಿಳಾ ಸಮಾವೇಶ ಏರ್ಪಡಿಸಲಾಗಿದೆ.
ಮಾರ್ಚ 2 ರಂದು ಪೂಜ್ಯ ನೀಲಕಂಠ ಸ್ವಾಮೀಜಿ ಅವರ ಅಮೃತ ಮಹೋತ್ವವ, ತುಲಾಭಾರ ಮಾರ್ಚ 3 ರಂದು ಮಹಾತಪಸ್ವಿ, ಶತಮಾನದ ಶಿವಯೋಗಿ ಮಹಾಂತ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಮಹಾರಥೋತ್ಸವ ಸಡಗರದಿಂದ ನಡೆಸಲಾಗುವದು ಎಂದರು.
ಚಿಕ್ಕೋಡಿಯ ಚರಮೂರ್ತೇಶ್ವರ ಮಠದ ಸಂಪಾದನಾ ಮಹಾಸ್ವಾಮೀಜಿ, ಅರಳಿಕಟ್ಟಿಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ಮಹಾಂತ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿದರು.
ವೇದಿಕೆಯ ಮೇಲೆ ದೇವರಶಿಗಿಹಳ್ಳಿಯ ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ತಾರಿಹಾಳದ ಅಡವೀಶ ದೇವರು, ಯರಗೊಪ್ಪದ ಶರಣಮ್ಮ, ಅಮೃತ ಮಹೋತ್ಸವ ಅಧ್ಯಕ್ಷ ಸೋಮಶೇಖರ್ ಪಟ್ಟಣಶೆಟ್ಟಿ. ಗೌರವಾಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ಬೆಳಗಾವಿ ಸೇರಿದಂತೆ ಗಣ್ಯರು,ಪಾಠ ಶಾಲಾ ವಿದ್ಯಾರ್ಥಿಗಳು ಸದ್ಭಕ್ತರು ಉಪಸ್ಥಿತರಿದ್ದರು.ಮಲ್ಲನಗೌಡ ಗೌಡ್ತಿ ಸ್ವಾಗತಿಸಿದರು. ಕುಮಾರ ಪೂಜೇರ ನಿರೂಪಿಸಿದರು.