ಅಮೃತ ಮಹೋತ್ಸವ: ಆ. 8 ರಂದು ಸೈಕಲ್ ಮ್ಯಾರಾಥಾನ್

ಕಲಬುರಗಿ,ಆ.5:ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಇದೇ ಆಗಸ್ಟ್ 8 ರಂದು ಬೆಳಿಗ್ಗೆ 7 ಗಂಟೆಗೆ ಕಲಬುರಗಿ ಮಹಾನಗರಪಾಲಿಕೆ ಕಚೇರಿಯ ಮುಂಭಾಗದಲ್ಲಿ ಸೈಕಲ್ ಮ್ಯಾರಾಥಾನ್ ಆಯೋಜಿಸಿದೆ ಎಂದು ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ ತಿಳಿಸಿದ್ದಾರೆ.