ಅಮೃತ ಮಹೊತ್ಸವದ ಪೂರ್ವಭಾವಿ ಸಭೆ


ಶಿರಹಟ್ಟಿ,ಮಾ.1: ಶಿರಹಟ್ಟಿ ಪಟ್ಟಣದ ಭಾವೈಕ್ಯತೆಯ ಪೀಠವಾದ ಶ್ರೀ ಜಗದ್ಗರು ಫಕ್ಕಿರೇಶ್ವರ ಸಂಸ್ಥಾನಮಠದ 13ನೇ ಪಟ್ಟಾಧೀಶರಾದ ಫ. ಸಿದ್ದರಾಮ ಮಹಾಸ್ವಾಮಿಜಿಗಳವರ 75ನೇ ಹುಟ್ಟು ಹಬ್ಬದ ನಿಮಿತ್ಯ ಅಮೃತ ಮಹೋತ್ಸವ ಕಾರ್ಯಕ್ರಮ 2024 ಫೆಬ್ರುವರಿಯಲ್ಲಿ ಜರುಗಲಿದೆ. ಆದ್ದರಿಂದ ಶ್ರೀಗಳ ಬಂಗಾರ ತುಲಾಭಾರ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕಾರ್ಯ ಶ್ಲಾಘನೀಯವಾಗಿದೆ. ಭಕ್ತರಿಗೆ ಮುಕ್ತವಾಗಿ ತಮ್ಮ ತಮ್ಮಅರ್ಪಣಾ ಮನೋಭಾವನೆಯ ಬಯಕೆಗಳನ್ನು ಈಡೇರಿಸಲು ಈ ಅಮೃತ ಮಹೋತ್ಸವ ಉತ್ತಮವೇದಿಕೆಯಾಗಲಿದೆ ಎಂದು ಮಾಜಿ ಮುಖ್ಯಮತ್ರಿ ಜಗದೀಶ ಶೆಟ್ಟರ ಹೇಳಿದರು.
ಅವರು ಪಟ್ಟಣ ಶ್ರೀ ಜಗದ್ಗುರು ಫಕ್ಕಿರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶಿರಹಟ್ಟಿಯ ಶ್ರೀ ಮಠ ಸಾಕಷ್ಟು ವೈಶಿಷ್ಟ್ಯತೆ ಪರಂಪರೆಗಳನ್ನು ಹೊಂದಿರುವ ಮಠವಾಗಿದ್ದು, 13ನೇ ಪಟ್ಟಾಧೀಶರಾದ ಜ.ಫ.ಸಿದ್ದರಾಮ ಮಹಾಸ್ವಾಮಿಜಿಗಳು ಶ್ರೀ ಮಠದ ಅಭಿವೃದ್ದಿಗಾಗಿ ಮತ್ತು ಸಮಾಜದ ಉದ್ದಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಶ್ರೀಮಠದ ಗೌರವ ಮತ್ತುಘನತೆ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿರುವದರ ಜೊತೆಗೆ ಶಾಖಾ ಮಠಗಳ ಅಭಿವೃದ್ದಿಯನ್ನು ಕೈಗೊಂಡಿರುವುದು ಶ್ಲಾಘನೀವಾಗಿದೆ. ಅವರಿಗೆ ಬಂಗಾರ ತುಲಾಭಾರವನ್ನು ಕಾರ್ಯಕ್ರಮವನ್ನು ಕೈಗೊಂಡಿರುವುದು ಸೂಕ್ತಾಗಿದೆ ಎಂದು ಹೇಳಿದರು
ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ