ಅಮೃತ ಭಾರತ್, ಫೆ.೨೬ ಮೋದಿ ಚಾಲನೆ

(ಸಂಜೆವಾಣಿ ವಾರ್ತೆ)
ರಾಯಚೂರು,ಫೆ.೨೧-ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಆಯ್ಕೆಗೊಂಡ ರಾಯಚೂರು ಯಾದಗಿರಿ ಮತ್ತು ಆದೋನಿ ಸ್ಟೇಷನ್ ಗಳಿಗೆ ಫೆ.೨೬ ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸದಸ್ಯ ಮತ್ತು ಸಮಾಜ ಸೇವಕ ಡಾ.ಬಾಬುರಾವ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ರಾಜ ಅಮರೇಶ ನಾಯಕ ಅವರು ಭಾಗವಹಿಸಿಲಿದ್ದು ಅವರ ನಿರ್ದೇಶನ ಮೇರೆಗೆ ಅಮೃತ ಭಾರತ ಯೋಜನೆಯಡಿ ರಾಯಚೂರು ಯಾದಗಿರಿ ಮತ್ತು ಆದೋನಿ ರೈಲ್ವೆ ನಿಲ್ದಾಣಗಳನ್ನು ಪುನಾರಭಿವೃದ್ದಿಗೆ ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ದಿನದಂದು ಲೋಕಸಭಾ ಸಂಸದ ರಾಜ ಅಮರೇಶ ನಾಯಕ ಅವರು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ನೇರೆವೆರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಮೃತ ಭಾರತ ಯೋಜನೆಯ ಮೂಲಕ ರಾಯಚೂರು ಯಾದಗಿರಿ ಮತ್ತು ಆದೋನಿ ಸ್ಟೇಷನ್ ಗಳನ್ನು ಪುನರಾಭಿವೃದ್ದಿ ಮೂಲಕ ಹೊಸ ರೈಲ್ವೆ ನಿಲ್ದಾಣ ಮಾದರಿಯಲ್ಲಿ ರೂಪುಗೊಳ್ಳಲಿದೆ ಎಂದರು.ಜನರ ಬೇಡಿಕೆಯಂತೆ ರೈಲ್ವೆ ನಿಲ್ದಾಣಗಳಿಗೆ ಹೊಸ ರೂಪ ಬರಲಿದೆ ಎಂದರು.ಅಮೃತ ಭಾರತ ಯೋಜನೆಯನ್ನು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಮಾದರಿಯಲ್ಲಿ ಏಕಕಾಲಕ್ಕೆ ಚಾಲನೆ ನೀಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲಕ್ಕೆ ಚಾಲನೆ ನೀಡುವುದರ ಮೂಲಕ ರಾಯಚೂರು ಮತ್ತು ಯಾದಗಿರಿ ನಿಲ್ದಾಣದ ಅಭಿವೃದ್ಧಿಗೆ ಶುಕ್ರದೆಸೆ ಬಂದಂತಾಗಿದೆ.
ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆರಿದ್ದು ಅಮೃತ ಭಾರತ ಯೋಜನೆಯಡಿ ಈ ಮೂರು ಜಿಲ್ಲೆಗಳ ನಿಲ್ದಾಣಗಳ ಪುರನಾಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು.
ಚಾಲನೆ ಕಾರ್ಯಕ್ರಮ ದಿನದಂದು ಸಚಿವರು ಶಾಸಕರು, ಸದಸ್ಯ ರಾಯಚೂರು ಚೇಂಬರ್ ಅಂಡ್ ಕಾಮರ್ಸ್, ಶಿಕ್ಷಣ ತಜ್ಞರು, ಸಂಘಟನೆ ಮುಖಂಡರು ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ ಎಂದರು.ಜಿಲ್ಲೆಯ ಎಲ್ಲ ಗಣ್ಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಾಬುರಾವ ಕೋರಿದರು.