ಅಮೃತ ನಗರೋತ್ಥಾನ ಕಾಮಗಾರಿ ನೆನೆಗುದಿಗೆ

ಲಿಂಗಸುಗೂರ,ಜೂ.೧೯-
ಪುರಸಭೆ ೨೦೨೨-೨೦೨೩ ನೇ ಸಾಲಿಗೆ ಮಂಜೂರಾದ ಮುಖ್ಯ ಮಂತ್ರಿ ಅಮೃತನಗರೋತ್ಥಾನ ವಿವಿಧ ವಾರ್ಡಗಳಲ್ಲಿ ಸಿಸಿರಸ್ತೆ ಬಿಟಿ ರಸ್ತೆ ಇತರೆಅಭಿವೃದ್ದಿ ಕಾಮಗಾರಿಗಳು ಲೋಕಪೋಯೋಗಿ ಇಲಾಖೆವತಿಯಿಂದ ಇನ್ನು ಆರಂಭವಾಗದ ಕಾರಣ ನಾಗರಿಕರು ಕಾಮಗಾರಿ ಮೂರ್ಹತೆ ಎಂದು ಬರವದು ಎನ್ನುವದು ಪ್ರಶ್ನೆಯಾಗಿದೆ.
ಲಿಂಗಸುಗೂರ ಪಟ್ಟಣದ ವಿವಿಧ ವರ್ಡಗಳ ಅಭಿವೃದ್ದಿಗೆ ಸರಕಾರ ಮುಖ್ಯ ಮಂತ್ರಿ ಅಮೃತ ನಗರೋತ್ಥಾನ ೪ನೇ ಹಂತದ ಕಾಮಗಾರಿಗಳಿಗೆ ಒಟ್ಟು ೫೪೭.೫೭ ರೂಅನುದಾನ ಬಂದಿದ್ದು ಅದರಂತೆ ಪ್ಯಾಕೇಜಗಳಲ್ಲಿ ೪೫ ಕಾಮಗಾರಿ ಆರಂಭಿಸಬೇಕು ಈಗಾಗಲೆ ಸದರಿ ಪ್ಯಾಕೇಜ ಕಾಮಗಾರಿಗ ಟೆಂಡರ ಮಾಡಲಾಗಿದ್ದು ಗುತ್ತಿಗೆದಾರರು ನೇಮಿಸಲಾಗಿದ್ದು ಆದರೆ ಗುತ್ತಿಗೆ ಪಡೆದವರು ಇನ್ನು ಕಾಮಗಾರಿ ಆರಂಭಿಸುವಲ್ಲಿ ಮೀನ ಮೇಷ ಮಾಡಲಾಗುತ್ತದೆ.
ಸ್ಥಳೀಯ ಪುರಸಭೆ ಒಟ್ಟು ೨೩ ಸದಸ್ಯರು ಆಯ್ಕೆಯಾಗಿದ್ದು ಮೊದಲು ಕಾಂಗ್ರೆಸ್ಸ ಜೆಡಿಎಸನಲ್ಲಿದ್ದ ಸದಸ್ಯರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ಸ ಹಾಗೂ ಜರ್ನಾಧನ ರಡ್ಡಿ ಕೆಪಿಪಿಆರ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಈಗಾಗಲೆ ಅಧ್ಯಕ್ಷ ಉಪಾಧ್ಯಕ್ಷರ ಮೊದಲನೆ ಅವಧಿ ಅಧಿಕಾರ ಮುಗಿದಿದ್ದು ಸಹಾಯಕ ಆಯುಕ್ತರು ಆಡಳಿತಾಧಿಕಾರಿಗಳಾಗಿ ಅಧಿಕಾರ ಸ್ವಿಕರಿಸಿದ್ದಾರೆ.
ಪುರಸಭೆಗೆ ಬಂದ ೭ಕೋಟಿರೂ ೨ನೇ ಹಂತದ ನಗರೋತ್ಥಾಣ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತವಾಗಿದ್ದು ಗುತ್ತಿಗೆದಾರರು ಸಂಬಂದಿಸಿದ ಅಧಿಕಾರಿಗಳು ಸೇರಿ ಹಣ ದುರ್ಬಳಕೆ ಮಾಡಿರವದು ಕಂಡು ಬಂದಿದ್ದು ಹಲವಾರು ದೂರಗಳು ನೀಡಲಾಗಿದೆ.
ವಿಧಾನಸಭೆ ಚುನಾವಣೆ ನಿಮಿತ ಮುಖ್ಯಾಧಿಕಾರಿಯನ್ನು ಬದಲಾಯಿಸಿ ಬೇರೆ ಜಿಲ್ಲೆಯಧಿಕಾರಗಳ ವರ್ಗ ಮಾಡಿದ್ದು ಮುಖ್ಯಾಧಿಕಾರಿ ಬದಲಾವಣೆಯಿಂದ ಆಡಳಿತ ಸಂಪೂರ್ಣ ಕುಸಿದಿದ್ದು ನಾಗರಿಕರಿಗೆ ಅಗತ್ಯ ಮೂಲಸೌಕರ್ಯಗಳು ಸಿಗದಂತಾಗಿದೆ.
೨೦೨೨ ರಲ್ಲಿಯೆ ಲಿಂಗಸುಗೂರ ಪುರಸಭೆಗೆ ಮುಖ್ಯ ಮಂತ್ರಿ ಅಮೃತ ನಗರೋತ್ಥಾನ ಮಂಜೂರಾಗಿದ್ದು ವಿವಿಧ ವಾರ್ಡಗಳ ಕಾಮಗಾರಿಗಳ ವಿವರ ಸಹ ಮಾಡಲಾಗಿದ್ದು ಪುರಸಭೆ ಆಡಳಿತ ಹಾಗೂ ಲೋಕೊಪಯೋಗಿ ಇಲಾಖೆ ಗುತ್ತಿಗೆ ನೀಡಿದ್ದು ಕಾಮಗಾರಿ ಆರಂಭ ಸಂಬಂದವಿಲ್ಲದಂತಾಗಿದ್ದು ನಾಗರಿಕರ ಅನೂಕೂಲಕ್ಕೆ ನಗರೋತ್ಥಾಣ ಕಾಮಗಾರಿ ಆರಂಭಿಸಿ ಗುಣಮಟ್ಟ ಕಾಯ್ದುಕೊಂಡು ಸರಕಾರದ ಹಣ ದುರ್ಬಳಕೆಯಾಗದಂತೆ ಕ್ರಮ ಕೈಗೊಳ್ಳವರೆ ಕಾಯ್ದು ನೋಡಬೇಕು.
ಪೋಟೊ ರಫೀ-“ಪುರಸಭೆ ವಾರ್ಡಗಳಲ್ಲಿ ಕೂಡಲೆ ಗುಣ ಮಟ್ಟದ ನಗರೋತ್ಥಾಣ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಕ್ರಮ ಜರುಗಿಸಬೇಕು ಮುಖ್ಯ ಮಂತ್ರಿ ಅಮೃತ ನಗರೋತ್ಥಾನ ನಿರ್ಲಕ್ಷ್ಯವಹಿಸುವ ಅಧಿಕಾರಿ ಗುತ್ತಿದಾರ ವಿರುದ್ಧ ಕ್ರಮಕ್ಕೆ ರಾಯಚೂರ ಜಿಲ್ಲಾಧಿಕಾರಿಗಳಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಮಹ್ಮದ ರಫಿ ಒತ್ತಾಯಿಸಿರುವರು.