ಅಮೃತ್ ನಗರೋತ್ಥಾನ ಯೋಜನೆ ಕಾಮಗಾರಿ ಜಾರಿಗೆ ರವೀಂದ್ರನಾಥ್ ಮನವಿ

ಕೋಲಾರ, ಜ,೧೩- ಕೋಲಾರ ನಗರದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-೪ ರಡಿ ಕೋಲಾರ ಜಿಲ್ಲೆಯ ಕ್ರಿಯಾ ಯೋಜನೆಗೆ ಕರ್ನಾಟಕ ಸರ್ಕಾರವು ೪೦ ಕೋಟಿ ಹಣ ಮಂಜೂರು ಮಾಡಿರುವ ಬಗ್ಗೆ ಧನ್ಯವಾದಗಳನ್ನು ಸಲ್ಲಿಸುವ ಬಗ್ಗೆ ಮತ್ತು ಸದರಿ ಕ್ರಿಯಾ ಯೋಜನೆಯನ್ನು ತುರ್ತಾಗಿ ಜಾರಿ ಮಾಡಲು ನಗರಸಭಾ ಅಧ್ಯಕ್ಷೆ ಶ್ವೇತ ಶಬರೀಶ್‌ಗೆ ಸಾಮಾಜಿಕ ಕಾರ್ಯಕರ್ತ ಕೆ.ಎನ್.ರವೀಂದ್ರನಾಥ್ ಮನವಿ ಪತ್ರ ಸಲ್ಲಿಸಿದರು.
ಕೋಲಾರ ನಗರದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-೪ ರಡಿ ಕೋಲಾರ ಜಿಲ್ಲೆಯ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರವು ೪೦ ಕೋಟಿ ಹಣವನ್ನು . ಭಾರತರತ್ನ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ|| ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ರವರು ನಗರಗಳ ಅಭಿವೃದ್ದಿಗಾಗಿ ಯೋಜನೆಗೆ ಸೂಚಿಸಿದ್ದ ೧೮ ಅಂಶಗಳಿಗೆ ಬಿಡುಗಡೆ ಮಾಡಿರುತ್ತಾರೆ.
ನಗರ ಯೋಜನೆ, ಭೂ ಉಪಯೋಗ ಮತ್ತು ಕಟ್ಟಡಗಳ ನಿರ್ಮಾಣ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿ ಯೋಜನೆ, ರಸ್ತೆಗಳು ಮತ್ತು ಸೇತುವೆಗಳು, ಗೃಹ ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು, ಸಾರ್ವಜನಿಕ ಆರೋಗ್ಯ ನೈರ್ಮಲ್ಯ ಸಂರಕ್ಷಣೆ ಮತ್ತು ಘನ ವ್ಯರ್ಥ ಪದಾರ್ಥಗಳ ನಿರ್ವಹಣೆ, ಅಗ್ನಿ ಶಾಮಕ ಸೇವೆಗಳು, ನಗರ ವನ ನಿರ್ಮಣ ಪರಿಸರ ಸಂರಕ್ಷಣೆ ಮತ್ತು ಜೀವ ಪರಿಸರ ಅಂಶಗಳ ಸಂವರ್ಧನೆ,ಅಂಗವಿಕಲರು ಮತ್ತು ಮನೋವಿಕಲರೂ ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವುದು,
ಕೊಳಚೆ ಪ್ರದೇಶ ಅಭಿವೃದ್ದಿ ಹಾಗೂ ಅವುಗಳ ಸುದಾರಣೆ, ನಗರ ಬಡತನ ನಿರ್ವಹಣೆ,ಉದ್ಯಾನವನಗಳು ತೋಟಗಳು ಆಟದ ಮೈದಾನ,ಉದ್ಯಾನವನಗಳು ತೋಟಗಳು ಆಟದ ಮೈದಾನಗಳಂತಹ ನಗರ ಸೌಕರ್ಯಗಳು ಮತ್ತು ಸೌಲಭ್ಯಗಳು, ಸಾಂಸೃತಿಕ ಶೈಕ್ಷಣಿಕ ಮತ್ತು ಸೌಂದರ್ಯ ಸಂವರ್ಧನೆ, ಸ್ಮಶಾನಗಳು, ಮತ್ತು ವಿದ್ಯುತ್ ಚಿತಾಗಾರಗಳು, ದನ ದೊಡ್ಡಿಗಳು, ಜನನ ಮತ್ತು ಮರಣಗಳ ನೊಂದಣಿ, ಬೀದಿ ದೀಪಗಳು,
ವಾಹನ ನಿಲುಗಡೆ ಸ್ಥಳಗಳು, ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಸೇರುವಿಕೆಯ ಸೌಲಭ್ಯಗಳು, ಕಸಾಯಿ ಖಾನೆ ಮತ್ತು ಚರ್ಮದ ಹದ ಮಾಡುವ ಕಾರ್ಖಾನೆಗಳ ನಿಯಂತ್ರಣಕ್ಕಾಗಿ ಸರ್ಕಾರವು ಕಳೆದ ಮೇ ೧೮ ರಂದು ೪೦ ಕೋಟೆ ರೂಪಾಯಿ ಹಣವನ್ನು ಕೋಲಾರ ನಗರದ ೩೫ ವಾರ್ಡ್ ಮಂಜೂರು ಮಾಡಿರುವುದಕ್ಕೆ ಕೋಲಾರ ಜನತೆಯ ಪರವಾಗಿ ಕರ್ನಾಟಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಕೋಲಾರದ ನಗರಸಭೆಯಿಂದ ಒಟ್ಟು ೩೫ ವಾರ್ಡ್‌ಗಳಿಂದ ೨೦೨೧-೨೨ ಸಾಲಿನಲ್ಲಿ ಆರೋಗ್ಯ ಕರ ೬೩ ಲಕ್ಷ ರೂ, ಗ್ರಂಥಾಲಯ ಕರ ೨೬,೭೦ ಲಕ್ಷ ರೂ, ಬಿಕ್ಷಕರ ಕರ ೧೨,೮೦,ರೂ ಮತ್ತು ಸಾರಿಗೆ ಕರ ೭,೬೦,ಲಕ್ಷ ರೂ ಸೇರಿದಂತೆ ಒಟ್ಟು ೧,೧೦,೧೦,೦೦೦/- ರೂಪಾಯಿಗಳ ತೆರಿಗೆಯನ್ನು ಕರ್ನಾಟಕ ಸರ್ಕಾರಕ್ಕೆ ಸಂದಾಯವಾಗಿರುತ್ತದೆ.
ಸರ್ಕಾರದ ಆದೇಶದಲ್ಲಿ ಕಾಮಗಾರಿಗಳಿಗೆ ಹಣವು ಮಂಜೂರಾಗಿದ್ದರೂ ಸಹ ಕಾಮಗಾರಿಯನ್ನು ಕೈಗೊಳ್ಳಲು ವಿನಾಕಾರಣ ಮಂದಗತಿ ದೋರಣೆಯನ್ನು ಸಂಬಂದಪಟ್ಟವರು ಅನುಸರಿಸುತ್ತಿರುತ್ತಾರೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಮತ್ತು ೨೦೨೪ ನೇ ಸಾಲಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೇಲೆ ತಿಳಿಸಿದ ೧೮ ಅಂಶಗಳ ಕಾರ್ಯಕ್ರಮವು ಇನ್ನೂ ಜಾರಿಗೆ ಬಾರದೇ ನೆನೆಗುದಿಗೆ ಬಿದ್ದಿರುತ್ತದೆ. ನಿಗಧಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ನೀತಿ ಸಂಹಿತೆಯೂ ಅಡ್ಡಿ ಬರಲಿದೆ.
ಇದರ ಮುನ್ನೆಚ್ಚರಿಕೆ ಕ್ರಮವಾಗಿ ಮಂದಗತಿಯ ದೋರಣೆಯನ್ನು ಅನುಸರಿಸದೇ ಕೂಡಲೇ ಉಲ್ಲೇಖದಲ್ಲಿ ಕಂಡ ಸರ್ಕಾರದ ಆದೇಶದಲ್ಲಿ ಮಂಜೂರಾಗಿರುವ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ತುರ್ತಾಗಿ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಕೋಲಾರ ಜನತೆಯ ಪರವಾಗಿ ರವೀಂದ್ರನಾಥ್ ಮನವಿ ಮಾಡಿದ್ದಾರೆ.