ಅಮೃತಾ ವಿದ್ಯಾಲಯಕ್ಕೆ ಡಿ ಆರ್ ಆರ್ ಪರ್ಯಾಯ ಪಾರಿತೋಷಕ 

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೩; ನಗರದ ಪಿ ಬಿ ರಸ್ತೆಯಲ್ಲಿರುವ ಡಿ ಆರ್ ಆರ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕ ದಿ. ಆರ್ ಆರ್ ಶ್ರೀನಿವಾಸ್ ಮೂರ್ತಿ ಅವರ ಸ್ಮರಣಾರ್ಥ ನಗರ ಮಟ್ಟದ ಸಾಹಿತ್ಯ – ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಸಪ್ರಶ್ನೆ, ಭಾವಗೀತೆ, ಸಮೂಹ ಗೀತೆ, ಆಶುಭಾಷಣ, ಜ್ಞಾಪಕ ಶಕ್ತಿ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳಲ್ಲಿ ನಗರದ 17 ಕ್ಕೂ ಹೆಚ್ಚು  ಪ್ರೌಡಶಾಲೆಗಳ ವಿದ್ಯಾರ್ಥಿಗಳು  ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರತಿ ವಿಭಾಗದಿಂದಲೂ ಪ್ರತ್ಯೇಕ ಪ್ರಥಮ, ದ್ವಿತೀಯ, ತೃತಿಯ ಬಹುಮಾನ ನೀಡಲಾಯಿತು.ಅತಿಹೆಚ್ಚು ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದ ದಾವಣಗೆರೆ ನಗರದ ಅಮೃತ ವಿದ್ಯಾಲಯ ಪ್ರೌಢಶಾಲೆಗೆ ದಿ. ಆರ್ ಆರ್ ಶ್ರೀನಿವಾಸ್ ಮೂರ್ತಿ ಅವರ ಹೆಸರಿನ ಪರ್ಯಾಯ ಪಾರಿತೋಷಕ ನೀಡಿ ಗೌರವಿಸಲಾಯಿತು.ವೇದಿಕೆ ಕಾರ್ಯಕ್ರಮವನ್ನು ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷರು ಹಾಗೂ ಲೇಖಕರಾದ ಮಲ್ಲಮ್ಮ ನಾಗರಾಜ್ ಉದ್ಘಾಟಿಸಿ ಶುಭ ಕೋರಿದರು.ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ತ್ಯಾವಣಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಹಾಗೂ ಸಾಹಿತಿಯಾದ ಮಹಾಂತೇಶ್ ಬಿ ನಿಟ್ಟೂರು ಅವರು ಸಮಾರೋಪ ನುಡಿಯಾಡುವ ಜೊತೆ ಬಹುಮಾನ ವಿತರಿಸಿದರು . ಲೇಖಕ ಗಂಗಾಧರ ಬಿ ಎಲ್ ನಿಟ್ಟೂರ್ ಮಾತನಾಡಿದರು.ಸಂಸ್ಥೆಯ ಟ್ರಸ್ಟಿ ಶ್ರೀನಿವಾಸ್ ಮೂರ್ತಿ,  ಆಡಳಿತಾಧಿಕಾರಿ ಎಂ ಬಸವರಾಜಪ್ಪ , ಶ್ರೀಮತಿ ರಜನಿ ಕುಲಕರ್ಣಿ,  ಭೋಜರಾಜ್ ಯಾದವ್, ಬಸವನಗೌಡ, ಶ್ರೀಮತಿ ರಾಧಾ, ಟಿ ಮಹೇಶನ್, ಶಿವಾನಂದಯ್ಯ, ಮೂಗುಬಸಪ್ಪ ಸಮಾರಂಭದಲ್ಲಿ ಹಾಜರಿದ್ದರು .