
ಚಿತ್ರದುರ್ಗ. ಮಾ.೨೭; ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಒಂದು ದಿನದ ಮಾಹಿತಿ ಶಿಬಿರ ಹಾಗೂ ಸ್ವಚ್ಛತಾ ಆಂದೋಲನವನ್ನುಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳುಕಾಶಿಪುರದ ರೈಲ್ವೆ ಇಲಾಖೆಯ ಅಮೃತಾಪುರದ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದರು. ಅಮೃತಾಪುರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ವಿನೋದ್ ಮಾತನಾಡಿ. ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಮತ್ತು ಸೇವಾ ಮನೋಭಾವನೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ… ರೈಲ್ವೆ ಇಲಾಖೆಗೆ ಸೇರಬಯಸುವ ಮುಂದಿನ ಭವಿಷ್ಯದ ಯುವಕರಿಗೆ. ಮಾನಸಿಕ ಸಾಮರ್ಥ್ಯ. ವಿಜ್ಞಾನ. ಕಂಪ್ಯೂಟರ್ ಜ್ಞಾನ. ಭಾರತ ದೇಶದ ಸಂವಿಧಾನ. ಪ್ರಚಲಿತ ಘಟನೆಗಳನ್ನು ಸಂಪೂರ್ಣವಾಗಿ ಓದಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಗೊಳಿಸಿ. ವೃತ್ತಿಗೆ ಸೇರಬಹುದು. ರೈಲ್ವೆ ಇಲಾಖೆಯು ಅತಿ ದೊಡ್ಡ ಇಲಾಖೆಯಾಗಿದ್ದು. ರೈಲ್ವೆ ಪ್ರಯಾಣದ ಅವಧಿ. ರೈಲ್ವೆಯಲ್ಲಿ ಬಳಸುವ ಚಿಹ್ನೆಗಳು. ಹಾಗೂ ಬಾವುಟಗಳು. ಇಲಾಖೆಯಲ್ಲಿರುವ ಪೀಠೋಪಕರಣಗಳು. ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರ.. ಮಾಹಿತಿಯನ್ನು. ವಿನೋದ್ ರವರು ನೀಡಿದರು. ಅಧ್ಯಕ್ಷತೆ ವಹಿಸಿದ್ದ. ಪ್ರಾಂಶುಪಾಲರಾದ ಎನ್ ಬಸವಂತಪ್ಪ ನವರ ಮಾತನಾಡಿ. ವ್ಯಕ್ತಿ ಶಾಶ್ವತವಲ್ಲ. ವ್ಯಕ್ತಿ ಮಾಡಿದ ಸೇವೆಯ ಶಾಶ್ವತ. ಪ್ರಧಾನಮಂತ್ರಿಯವರು ತಿಳಿಸಿದಂತೆ ಕೌಶಲ್ಯ ಅಭಿವೃದ್ಧಿಯನ್ನು. ಬಳಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಪರಿಣಾಮಕಾರಿಯಾಗಿದ್ದು. ಈ ದಿನ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ತೆಗೆದುಕೊಂಡು. ಮುಂದಿನ ದಿನಗಳಲ್ಲಿ ತಾವುಗಳು. ಹೆಚ್ಚು ಉದ್ಯೋಗಸ್ಥ ರಾಗಿ ಎಂದು ತಿಳಿಸಿದರು.. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಿ ಕಲ್ಲೇಶ್ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಚಟುವಟಿಕೆಗಳಲ್ಲಿ. ಒಂದು ದಿನದ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು. ಸ್ವಚ್ಛತೆಯನ್ನು ಮಾಡಿ. ಅಲ್ಲಿರುವ ಪ್ರಯಾಣಿಕರಿಗೆ ಜಾಗೃತಿಯನ್ನು ಮೂಡಿಸುವುದರೊಂದಿಗೆ. ಪ್ರಜ್ಞಾವಂತ ವಿದ್ಯಾರ್ಥಿಗಳಾಗಿ. ತಮ್ಮ ಸೇವೆ ಶಾಶ್ವತವಾಗಿರಲಿ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ. ಶ್ರೀ ಧನಂಜಯ ರವರು ಮಾತನಾಡಿ. ಅಮೃತಪುರ ರೈಲ್ವೆ ನಿಲ್ದಾಣ ಸ್ವಚ್ಛತೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು…. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಜಿ. ಬಿ ಶಿವರಾಜ್. ಶಿಕ್ಷಕರುಗಳಾದ ರಂಗಪ್ಪ. ರಾಮಾಂಜನೇಯ. ಶ್ರೀಮತಿ ಅಸ್ಮಾ ಫಿರ್ದೋಸ್. ಸಿದ್ದಪ್ಪ. ಪ್ರಭಾಕರ್. ಇಕೋ ಕ್ಲಬ್ ನ ಕಾರ್ಯದರ್ಶಿಗಳಾದ ಚಂದ್ರಪ್ಪ ಮತ್ತು ಇತರರು ಭಾಗವಹಿಸಿದ್ದರು… ಕಾರ್ಯಕ್ರಮವನ್ನು ವಿದ್ಯಾರ್ಥಿ ಲಕ್ಷ್ಮಿ ನಿರೂಪಿಸಿದರು. ಅನನ್ಯ ಸ್ವಾಗತಿಸಿದರು.ಮಾನಸ ವಂದಿಸಿದರು