ಅಮೃತಸರೋವರದಲ್ಲಿ ಎಳ್ಳಾಮಾಸ್ಯೆ ಊಟಕ್ಕೆ ನಿಷೇಧ

ಕಲಬುರಗಿ.ಜ.11: ನಗರದ ಹೊರ ವಲಯದಲ್ಲಿ ಸೇಡಂ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದ ಅಮೃತ ಸರೋವರ ರಿಟ್ರೀಟ್ ಸೆಂಟರಿನ ಪರಿಸರದಲ್ಲಿ ಎಳ್ಳಮಾಸಿಯ ನಿಮಿತ್ಯ ಸಾಮಾನ್ಯವಾಗಿ ಇಲ್ಲಿ ಪ್ರತಿ ವರ್ಷ ಆರೆಂಟು ಸಾವಿರ ಜನ ಊಟಕ್ಕಾಗಿ ಬರುತ್ತಾರೆ. ಎಲ್ಲರಿಗೆ ವ್ಯವಸ್ಥೆ ಕೊಡಲು ಸಂತಸ. ಆದಾಗ್ಯೂ, ಈ ವರ್ಷ ಕೊರೊನಾ ಮಹಾಮಾರಿಯ ಕಾರಣ ಪರಿಸರದಲ್ಲಿ ಜನವರಿ 13,14 ಮತ್ತು 15ರಂದು ಊಟ ಮಾಡಲು ಸಾರ್ವಜನಿಕರಿಗೆ ಅವಕಾಶ ಇಲ್ಲ. ಆದ್ದರಿಂದ ಸಹಕರಿಸಬೇಕು ಎಂದು ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ಅವರು ವಿನಂತಿಸಿದ್ದಾರೆ.