ಅಮೃತರಾವ ಮಹಾರಾಜರಿಗೆ ಗೌರವ ಡಾಕ್ಟರೇಟ್ ಪ್ರಧಾನ

ಬೀದರ, ಏ. 02ಃ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಕೆ) ಗ್ರಾಮ ಹಾಗೂ ಬೀದರಿನ ವಿದ್ಯಾನಗರ ಕಾಲೋನಿಯ 11ನೇ ಕ್ರಾಸ್‍ನಲ್ಲಿರುವ ಶ್ರೀ ವೈಷ್ಣವದೇವಿ ಶಕ್ತಿ ಪೀಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅಮೃತರಾವ ಮಹಾರಾಜರ ಆಧ್ಯಾತ್ಮದ ಸೇವೆ ಗುರುತಿಸಿ ಅಮೇರಿಕ ದೇಶದ ಏಶಿಯಾ ವೈದಿಕ ಕಲ್ಚರಲ್ ಸಂಶೋಧನಾ ವಿಶ್ವವಿದ್ಯಾಲಯ ವತಿಯಿಂದ ಕಳೆದ 25 ರಂದು ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.