ಅಮೃತಮಹೋತ್ಸವ ಸ್ಥಳ ಪರಿಶೀಲನೆ ನಡೆಸಿದ ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ. ; ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 75 ನೇ ಅಮೃತ ಮಹೋತ್ಸವದ ಸ್ಥಳ ಪರಿಶೀಲನೆ ನಡೆಸಿದರು.ಬಳಿಕ ಪೆಂಡಾಲ್ ಹಾಗೂ ಇನ್ನಿತರ ಕಾಮಗಾರಿ ವೀಕ್ಷಿಸಿ, ಬೇಗ ಕೆಲಸ ಮುಗಿಸಲು ಸಲಹೆ ನೀಡಿದರು ಈ ಸಂದರ್ಭದಲ್ಲಿ  ಅಮೃತ ಮಹೋತ್ಸವದ ಪೆಂಡಾಲ್ ಉಸ್ತುವಾರಿಗಳಾದ ಮುದೆಗೌಡ್ರ ಗಿರೀಶ್, ಶಿವಗಂಗಾ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಗಾನಹಳ್ಳಿ ಪರಶುರಾಮ್, ಬೂದಳ ಬಾಬು, ಹರೀಶ್ ಬಸಾಪುರ ಇನ್ನಿತರರು ಉಪಸ್ಥಿತರಿದ್ದರು.