ಅಮೃತಕ್ಕೆ ಸಮಾನ ಅಮೃತಬಳ್ಳಿ:ವಿಭೂತಿ

ಹುಮನಾಬಾದ:ನ.10:ಇಂದಿನ ಕೊರೋನಾದಂಥಹ ಸಂದಿಗ್ದ ಪರಿಸ್ಥಿತಿಯಲ್ಲಿ ವೈರಸ್ ವಿರೋಧಿಯಾಗಿ ಅಮೃತ ಬಳ್ಳಿ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸದಾಶಿವಯ್ಯ ವಿಭೂತಿ ತಾಲ್ಲುಕಿನ ಮದರಗಾಂವ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಯಲ್ಲಿ ಅಮೃತ ಬಳ್ಳಿ ಸಸಿಗಳನ್ನು ವಿತರಿಸುವ ಮೂಲಕ ಮಾತನಾಡಿದರು. ಅಮೃತಬಳ್ಳಿ ತಿಂದರೆ ಬಿಪಿ, ಶುಗರ್ ಕಂಟ್ರೋಲಿಗೆ ಬರುತ್ತದೆ. ಇದರ ರಸ ಅಥವಾ ಕಷಾಯ ಸೇವಿಸುವುದರಿಂದ ಜ್ವರ ನಿವಾರಣೆಯಾಗುತ್ತದೆ. ಕೀಲು ನೋವಿಗೆ ಅಮೃತದ ಕಾಂಡ ಮತ್ತು ಶುಂಠಿ ಪುಡಿಯಿಂದ ತಯಾರಿಸಿದ ಕಷಾಯ ಕೀಲು ನೋವಿಗೆ ಪರಿಣಾಮಕಾರಿ ಔಷಧಿ. ಅಮೃತಬಳ್ಳಿ ಸೋಕು ನಿರೋಧಕ ಶಕ್ತಿ ಹೊಂದಿರುತ್ತದೆ. ಮಕ್ಕಳಲ್ಲಿ ಬ್ಲಡ್ ಪ್ಲಾಟಿಲ್ಲೆಟ್ಸ್ ಅಧಿಕಗೊಳಿಸುವಲ್ಲಿ ಪರಿಣಾಮಕಾರಿ ಔಷಧ ಹಾಗೂ ಅಮೃತ ಬಳ್ಳಿ ಒಂದು ಆರೋಗ್ಯಕ್ಕೆ ದಿವ್ಯ ವನಸ್ಪತಿ ಎಂದರು. ಮಲ್ಲಿಕಾರ್ಜುನ ಮಹೇಂದ್ರಕರ್, ಚನ್ನಬಸವ ಹುಚ್ಚೆ, ಸತೀಷ ರತ್ನಕರ್, ಕಂಟೇಪ್ಪಾ ಕುರುಬಖೇಳಗೆ, ಶಂಕರ ದುರ್ಗದ್, ಈಶ್ವರ ಚಿದ್ರಿ ಉಪಸ್ಥಿತರಿದ್ದರು.