ಶಹಾಪುರ:ಎ.9:ಶಹಾಪುರ ಕರ್ನಾಟಕದಲ್ಲಿ ಅಮೂಲ್ ಕಂಪನಿಯ ಹಾಲು ಮತ್ತು ಮೊಸರು ಮಾರಾಟ ಮನೆಮನೆಗೆ ಮಾಡುವ ಯೋಜನೆ ರೂಪಿಸಿದ್ದು ಇದನ್ನು ಕೈ ಬಿಡಬೇಕು ಮತ್ತು ಮಾರಾಟ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ “ವೇದಿಕೆ ಪ್ರವೀಣಶೆಟ್ಟಿ ಬಣದ ತಾಲೂಕ ಅಧ್ಯಕ್ಷರಾದ ವೆಂಕಟೇಶ ಬೊನೇರ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಕೆಎಂಎಫ್ ಸಂಸ್ಥೆ ನಂದಿನಿ ಎಂಬ ಹೆಸರಿನ ಹಾಲು ಮತ್ತು ಮೊಸರು ಇತರ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಇದರಿಂದ ಅನೇಕ ಉದ್ಯೋಗಗಳು ಸೃಷ್ಟಿಯಾಗಿವೆ. ರೈತರಿಗೆ ಅನುಕೂಲವಾಗಿದೆ. ಈ ಹಿಂದೆ ಯಡಿಯೂರಪ್ಪನವರು, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಂದಿನಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಏಕಾಏಕ ಅಮೂಲ ಹಾಲು ಮೊಸರು ರಾಜ್ಯದ ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದ್ದಾರೆ. ಅಮೂಲ್ ಮತ್ತು ನಂದಿನಿ ಸಂಸ್ಥೆಗಳನ್ನು ವಿಲೀನಗೊಳಿಸುವ ಹುನ್ನಾರದ ಪರಿಣಾಮ ನಂದಿನಿ ಉತ್ಪನ್ನಗಳ ಕೃತಕ ಅಭಾವ ತಲೆದೋರಿದೆ. ತಕ್ಷಣ ಇದನ್ನು ಕೈ ಬಿಡದಿದ್ದರೆ ರಾಜ್ಯದಾದ್ಯಂತ ತಮ್ಮ ಸಂಘಟನೆಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರವೀಣ ಶೆಟ್ಟಿ ಬಣದ ರಕ್ಷಣಾ ವೇದಿಕೆಯ ತಾಲ್ಲೂಕ ಅಧ್ಯಕ್ಷರಾದ ಶ್ರೀ ವೆಂಕಟೇಶ ಬೊನೇರ ಎಚ್ಚರಿಸಿದರು.