ಶಿವಮೊಗ್ಗ. ಏ.೧೧; ಕರ್ನಾಟಕ ರಾಜ್ಯದ ನಂದಿನಿ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಗುಜರಾತ್ ರಾಜ್ಯದ ಅಮೂಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಬಾರದು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಸೋಮವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಒಭಟನೆ ನಡೆಸಿತು. ನಂತರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು.ನಂದಿನಿ ಹಾಲು ಎಲ್ಲೆಡೆ ಪ್ರಸಿದ್ದಿ ಹೊಂದಿದೆ. ಉತ್ತಮ ಗುಣಮಟ್ಟದ್ದಾಗಿದೆ. ಸಾವಿರಾರು ಕೋಟಿ ರೂ.ವ್ಯವಹಾರ ನಡೆಸುತ್ತಿದೆ. ಇಂತಹ ಸಂಸ್ಥೆಯನ್ನುಅಮೂಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನವಿ ಅರ್ಪಣೆ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಪ್ರಮುಖರಾದ ಎಸ್.ಶಿವಮೂರ್ತಿ, ಹಿಟ್ಟೂರು ರಾಜು, ಪಿ.ಶೇಖರಪ್ಪ, ಇ.ಬಿ.ಜಗದೀಶ್, ಜ್ಞಾನೇಶ್, ಚಂದ್ರಪ್ಪ, ರುದ್ರೇಶ್, ರಾಘವೇಂದ್ರ, ಮಂಜಪ್ಪ ಸೇರಿದಂತೆ ಮೊದಲಾದವರಿದ್ದರು