ಅಮೂಲ್ ಕಂಪನಿಯೊಂದಿಗೆ  ನಂದಿನಿ ಹಾಲು ವಿಲೀನ ಖಂಡಿಸಿ ಪ್ರತಿಭಟನೆ

ದಾವಣಗೆರೆ.ಏ.೧೪; ಗುಜರಾತಿನ ಅಮೂಲ್ ಕಂಪನಿಯೊಂದಿಗೆ ಕರ್ನಾಟಕದ ನಂದಿನಿ ಹಾಲನ್ನು ವಿಲೀನ ಮಾಡುವುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ನಾರಾಯಣಗೌಡ ಬಣವು ಪ್ರತಿಭಟನೆ ನಡೆಸಿತು.ಮಹಾನಗರ ಪಾಲಿಕೆ ಆವರಣದಿಂದ ಆರಂಭಗೊಂಡ ಪ್ರತಿಭಟನೆ ಉಪ ವಿಭಾಗಾಧಿಕಾರಿ ಕಚೇರಿ ತಲುಪಿತು. ನಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಕೆಎಂಎಫ್ ಸಂಸ್ಥೆಯ ಎಲ್ಲಾ ಉತ್ಪನ್ನಗಳನ್ನು ಖರೀದಿಸಿ ಕರ್ನಾಟಕದ ರೈತರ ಬದುಕು ಹಸನಾಗಿಸಬೇಕು. ರೈತರ ಬೆನ್ನೆಲುಬಾಗಿ ನಿಂತಿರುವ ಕೆಎಂಎಫ್ ನಂದಿನಿ ಹಾಲಿನ ನಿಗಮವನ್ನೇ ರಾಜ್ಯ ಸರ್ಕಾರ ಮುಚ್ಚುವ ಹುನ್ನಾರ ನಡೆಸುತ್ತಿದೆ. ಇದು ಖಂಡನೀಯ, ಅಲ್ಲದೇ ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನೇ ಖರೀದಿಸುವಂತೆ ಕರೆ ನೀಡಿದರು. ಒಂದು ವೇಳೆ ಅಮೂಲ್ ತೆಕ್ಕೆಗೆ ನಂದಿನಿ ಹೋದಲ್ಲಿ, ಕರ್ನಾಟಕದ ಲಕ್ಷಾಂತರ ರೈತರು ಬೀದಿಪಾಲಾಗುತ್ತಾರೆ. ಕನ್ನಡಿಗರು ಕಟ್ಟಿದ ಬ್ಯಾಂಕುಗಳನ್ನು ಕಬಳಿಸಿದವರು. ಈಗ ಕನ್ನಡಿಗರ ಹೆಮ್ಮೆಯ ಸಂಸ್ಥೆ ನಂದಿನಿಯನ್ನು ನುಂಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಕರವೇ ಉಗ್ರ ಹೋರಾಟ ರೂಪಿಸಲಿದೆ ಎಂದು ಕಿಡಿಕಾರಿದರು.ಈ ವೇಳೆ ಎನ್.ಟಿ.ಹನುಮಂತಪ್ಪ, ಜಿ.ಎಸ್.ಸಂತೋಷ್, ಡಿ.ಗಜೇಂದ, ಜೈನ ಭಾರತಿ, ಮಹೇಶ್ವರಪ್ಪ, ಶಾಂತಮ್ಮ, ಮಂಜುಳಾ ಮಾಂತೇಶ್, ಜಬಿವುಲ್ಲಾ, ರಫಿಕ್, ಸುರೇಶ್, ರಾಘವೇಂದ್ರ, ಧೀರೇಂದ್ರ, ಚಂದ್ರಶೇಖರ್, ರಾಘವೇಂದ್ರ, ಕಾರ್ತಿಕ್, ವಿನಯ್, ಪಿ..ಕರಬಸಪ್ಪ, ಅಯೂಬ್, ಮಂಜುನಾಥ್, ತುಳಸಿರಾಮ್, ಬಸವರಾಜ್ ಇತರರು ಇದ್ದರು.