ಅಮೂಲ್ ಉತ್ಪನ್ನಗಳು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹ

ರಾಯಚೂರು,ಏ.೧೨- ಕರ್ನಾಟಕ ರಾಜ್ಯದಲ್ಲಿ ಹಾಲು-ಮೊಸರು ಸೇರಿದಂತೆ ಇನ್ನಿತರ ಉತ್ಪನ್ನಗಳು ಮಾರಾಟ ಮಾಡಲು ಮುಂದಾಗಿರುವ ಗುಜರಾತ್ ಮೂಲದ ಅಮೂಲ್ ಕಂಪನಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕವು ಉಗ್ರವಾಗಿ ಖಂಡಿಸುತ್ತದೆ.
ಯಾವುದೇ ಕಾರಣಕ್ಕೂ ಅಮೂಲ್ ತನ್ನ ಹಾಲು-ಮೊಸರನ್ನು ಕರ್ನಾಟಕದಲ್ಲಿ ಮಾರಾಟ ನಡೆಸಕೂಡದು. ಒಂದು ವೇಳೆ ಕನ್ನಡಿಗರ ವಿರೋಧವನ್ನು ಲೆಕ್ಕಿಸದೆ ಮಾರಾಟಕ್ಕೆ ಮುಂದಾದರೆ ಅಮೂಲ್ ಸಂಸ್ಥೆಯ ಎಲ್ಲ ವಸ್ತುಗಳ ಮಾರಾಟಕ್ಕೂ ಅಡ್ಡಿಪಡಿಸಲಾಗುವುದು ಎಂಬ ಸಂಘಟನೆಯ ಎಚ್ಚರಿಕೆಯನ್ನು ರಾಜ್ಯಾದ್ಯಂತ ನೀಡಲಾಗಿದೆ.
ಸಹಕಾರಿ ಸಂಸ್ಥೆಗಳ ವಿಲೀನದ ಹೆಸರಲ್ಲಿ ಅಮೂಲ್ ಜೊತೆ ನಂದಿನಿ (ಕೆಎಂಎಫ್) ವಿಲೀನಗೊಳಿಸುವ ದೊಡ್ಡ ಷಡ್ಯಂತ್ರದ ಸಂಚನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಕನ್ನಡಿಗರು ಅವಕಾಶ ನೀಡುವುದಿಲ್ಲ. ನಮ್ಮ ಹೆಮ್ಮೆಯ ಸಂಸ್ಥೆ ನಂದಿನಿಯನ್ನು ಹಾಳುಗೆಡವಲು ಬಿಡುವುದಿಲ್ಲ ಎಂಬ ನೇರ ಸಂದೇಶವನ್ನು ಕರವೇ ಜಿಲ್ಲಾಧ್ಯP ವಿನೋದರೆಡ್ಡಿ ಎಂ. ಪತ್ರಿಕೆಯ ಮೂಲಕ ರವಾನಿಸಿದ್ದಾರೆ.
ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಅಮೂಲ್ ಹಾಲು-ಮೊಸರು ಮಾರಾಟಕ್ಕೆ ಮುಂದಾದರೆ ಮಾರಾಟ ಮಾಡುವ ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಎಚ್ಚರಿಕೆ ನೀಡಿದ್ದಾರೆ.
ನಾಡಿನ ರೈತರು ಹಾಗೂ ಹಾಲು ಉತ್ಪಾದಕರನ್ನು ತುಳಿಯಲು ಮುಂದಾಗಿರುವ ಅಮೂಲ್ ಕಂಪನಿಯ ಹಾಲು-ಮೊಸರು ಮತ್ತು ಇನ್ನಿತರ ಉತ್ಪನ್ನಗಳ ಮಾರಾಟವನ್ನು ತPಣವೇ ಕರ್ನಾಟಕದಲ್ಲಿ ನಿಷೇಧಿಸಬೇಕು. ಅಮೂಲ್ ತನ್ನ ನಿಲುವು ಬದಲಿಸದಿದ್ದಲ್ಲಿ ಚಳವಳಿ ಯಾವ ಸ್ವರೂಪಕ್ಕಾದರೂ ತಿರುಗಬಹುದು ಎಂಬ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ವಿನೋದರೆಡ್ಡಿ. ಎಂ. ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.