ಅಮೂಲ್ಯ ಹಿ.ಪ್ರಾ.ಶಾಲೆಯಲ್ಲಿ 12ನೇ ವರ್ಷದ ಶಾಲಾ ವಾರ್ಷಿಕೋತ್ಸವ

ಬೀದರ :ಫೆ.23:ತಾಲೂಕಿನ ಮರಖಲ್ ಅಮೂಲ್ಯ ಶಾಲೆಯಲ್ಲಿ 12ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ ಜಾಬಾ ರವರು ಆಗಮಿಸಿ, ಶಾಲಾ ಶಿಕ್ಷಣದ ಬಗ್ಗೆ ಹಿತನುಡಿಗಳನ್ನು ನುಡಿದರು. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹರ್ಷವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ಗ್ರಾಮ ಪಂಚಾಯತ್ ಸದಸ್ಯರು ಸೋಮು ಓಂಕಾರೆ ಅವರು ಕೂಡ ವಾರ್ಷಿಕೋತ್ಸವಕ್ಕೆ ಆಗಮಿಸಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನೋಡಿ, ಮಕ್ಕಳಿಗೆ ಅಭಿನಂದಿಸಿದರು.
ಈ ಕಾರ್ಯಕ್ರಮದ ಅತಿಥಿಗಳಾದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಡಿ. ಜಾಕೀರ್ ಹುಸೇನ್ ಕಾರ್ಯಕ್ರಮಕ್ಕೆ ಆಗಮಿಸಿ, ಶಾಲೆಯ ಬಗ್ಗೆ ಗ್ರಾಮೀಣ ಭಾಗದಲ್ಲಿ ಇದ್ದರೂ ಒಳ್ಳೆಯ ಶಿಕ್ಷಣ ಮತ್ತು ನೈತಿಕ ಮೌಲ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸುತ್ತಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಾಲಕರಿಗೆ ಹೇಳುತ್ತಾ, ಶಾಲೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿಗಳಾದ ಧನರಾಜ ಗುಡಮೆ, ಕ್ಷೇತ್ರ ಸಮನ್ವಯ ಅಧಿಕಾರಿಗಳು ಬೀದರ ಇವರು ಈ ಕಾರ್ಯಕ್ರಮಕ್ಕೆ ಆಗಮಿಸಿ, ಶಾಲೆ ಎಂದರೇ ಜ್ಞಾನದೇಗುಲ ಎಂದು ಹೇಳುತ್ತಾ, ದಾನದಲ್ಲಿ ಶ್ರೇಷ್ಠದಾನ ವಿದ್ಯೆದಾನ ಎಂದು ಹೇಳುವುದರ ಮೂಲಕ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ, ತಮ್ಮ ಹಿತನುಡಿಗಳನ್ನು ನುಡಿದರು.
ಈ ಕಾರ್ಯಕ್ರಮದ ಅತಿಥಿಗಳಾದ ಮಾಣಿಕರಾವ ಸಿ.ಆರ್.ಪಿ. ಅವರು ಆಗಮಿಸಿದರು, ಅವರು ಶಾಲೆ ಕುರಿತು ಮಕ್ಕಳ ಶಿಕ್ಷಣದ ನೈತಿಕತೆಯ ಮೌಲ್ಯದ ಬಗ್ಗೆ ಹೇಳಿದರು ಹಾಗೆ ನಮ್ಮ ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ನಡೆಸುತ್ತಿರುವುದು ನನಗೆ ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹರ್ಷವ್ಯಕ್ತಪಡಿಸಿದರು.
ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಪುನೀತ್ ಸಾಳೆ ಅವರು ಅತಿಥಿಗಳಾಗಿ ಆಗಮಿಸಿ, ಶಾಲೆಯಲ್ಲಿ ನಡೆಸುತ್ತಿರುವ ಎಲ್ಲಾ ಸರ್ಕಾರಿ ಕಾರ್ಯಕ್ರಮ ನಡೆಸುವುದರ ಜೊತೆಗೆ, ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಹಾಗೂ ಜರ್ದಶಿ ತರಬೇತಿ ಮತ್ತು ಶಾಲೆ ಬಿಟ್ಟ ಮಹಿಳೆಯರಿಗೆ ಹಾಗೂ ಯುವಕರಿಗೆ ಉಚಿತ ಶಿಕ್ಷಣ ನೀಡಿ, ಅವರಿಗೆ ಹತ್ತನೇ ತರಗತಿಯನ್ನು ಉತ್ತೀರ್ಣ ಮಾಡಿಸುವುದರ ಜೊತೆಗೆ ಅವರಿಗೆ ಹತ್ತು ಸಾವಿರ ರೂಪಾಯಿ ಸಹಾಯಧನ ನೀಡುವುದರ ಮೂಲಕ ಮತ್ತು ಈ ಸಂಸ್ಥೆ ಅಭಿವೃದ್ಧಿಯನ್ನು ಕುರಿತು ಹೆಮ್ಮೆಯಿಂದ ನಾನು ಅಭಿನಂದಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಲಾ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ಯರನಳ್ಳಿ ಹಾಗೂ ಶಾಲಾ ಮುಖ್ಯ ಗುರುಗಳು ಶ್ರೀಮತಿ ಭಾಗ್ಯವತಿ ಹುಡ್ಗಿಕರ್ ರವರು ಕೃಷ್ಣ ಧೋಮಲ (ಸಿ.ಎ) ಕಾರ್ತಿಕ ಹಾಗೂ ಸದಸ್ಯರು ಶ್ರೀಮತಿ ಸುರೇಖಾ ಯರನಳ್ಳಿ ಹಾಗೂ ಶ್ರೀಮತಿ ಅನಿತಾ ಯರನಳ್ಳಿ ಮತ್ತು ಶಾಲಾ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದರು.
ಶ್ರೀಮತಿ ಫ್ಲಾರೆನ್ಸ್ ಅಭಿಷೇಕ ನಿರೂಪಿಸಿದರು, ಶ್ರೀಮತಿ ಅಶ್ವಿನಿ ಬಸವರಾಜ ಆಲೂರೆ ಸ್ವಾಗತಿಸಿದರು, ಶ್ರೀಮಾನ್ಯ ಕುಶಾಲರಾವ ಎಸ್. ಯರನಳ್ಳಿ ಅವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು.