ಅಮೂಲ್ಯ ಮಕ್ಕಳ ನಾಮಕರಣಕ್ಕೆ ಸೆಲೆಬ್ರಿಟಿಗಳ ದಂಡು

ಬೆಂಗಳೂರು, ನ. ೧೨- ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಅಮೂಲ್ಯ ಮಕ್ಕಳ ನಾಮಕರಣ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಶಿವಣ್ಣ , ಗೋಲ್ದನ್‌ಸ್ಟಾರ್‌ಗಣೇಶ್‌ಸೇರಿದಂತೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭಕೋರಿದ್ದಾರೆ.
ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಅದ್ಧೂರಿಯಾಗಿ ಅವಳಿ ಮಕ್ಕಳ ನಾಮಕರಣ ಕಾರ್ಯಕ್ರಮ ನೆರವೇರಿದ್ದು ಸೆಲೆಬ್ರಿಟಿಗಳ ದಂಡೇ ಹರಿದುಬಂದಿತ್ತು.
ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಅಮೂಲ್ಯ. ೨೦೧೭ರಲ್ಲಿ ಆದಿಚುಂಚನಗಿರಿಯಲ್ಲಿ ಜಗದೀಶ್ ಆರ್ ಚಂದ್ರ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ನಂತರ ಸಿನಿಮಾದಿಂದ ದೂರವಾದರು. ಈ ದಂಪತಿಗೆ ಮುದ್ದಾದ ಅವಳಿ ಗಂಡುಮಕ್ಕಳು ಜನಿಸಿದ್ದು, ನಿನ್ನೆ ಅದ್ಧೂರಿಯಾಗಿ ನಾಮಕರಣ ಕಾರ್ಯಕ್ರಮ ಜರುಗಿತು. ಈ ವೇಳೆ ಸ್ಯಾಂಡಲ್‌ವುಡ್ ಗಣ್ಯರ ದಂಡೇ ಹರಿದುಬಂದಿತ್ತು.
ಖಾಸಗಿ ಹೋಟೆಲ್ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಅಮೂಲ್ಯ, ಜಗದೀಶ್ ದಂಪತಿ ತಮ್ಮ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ಹೆಸರು ಇಟ್ಟಿದ್ದಾರೆ.