ಅಮುಲ್ ಹಾಲು ರಾಜ್ಯಕ್ಕೆ ಬೇಡ: ಪಂಪಣ್ಣ ನಾಯಕ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.09: ರಾಜ್ಯದಲ್ಲಿ ಅಮೂಲ್ ಸಂಸ್ಥೆಯ ಹಾಲು ಮತ್ತು ಮೊಸರು ಕ್ವಿಕ್ ಕಾಮರ್ಸ್ ಪ್ಲಾಟ್ ಫಾರ್ಮ್ ಕೈ ಬಿಡಬೇಕು.ಇಲ್ಲದಿದ್ದರರೆ ಕರವೇ ಪ್ರವೀಣ ಶೇಟ್ಟಿ ಬಣದಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರೈತರ ಮನೆ ಮಾತಗಾರಿರುವ ನಂದಿನಿ ಕೆ.ಎನ್.ಎಫ್ ಈಗಾಗಲೇ ಸಾಕಷ್ಟು ಬಡ ರೈತರಿಗೆ & ಅನೇಕ ಕೂಲಿ ಕಾರ್ಮಿಕರಿಗೆ ಬೆನ್ನೆಲಬು ಆಗಿ ನಿಂತಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನವರು ಮುಖ್ಯ ಮಂತ್ರಿಯಾಗಿದ್ದಾಗ ನಂದಿನಿ ಹಾಲು ಉತ್ಪಾದಕರಿಗೆ ಬೆನ್ನೆಲುಬಾಗಿ ನಿಂತಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಗೃಹ ಮಂತ್ರಿಗಳಾದ ಅಮಿತ್ ಶಾ ಅವರು ಏಕಏಕಿ ಅಮುಲ್ ಹಾಲು, ಮೊಸರನ್ನು ರಾಜ್ಯದಲ್ಲಿ ಪರಿಚಿಸುವ ಸಲುವಾಗಿ ಕನ್ನಡಿಗರ ಮೇಲೆ ಒತ್ತಾಯವನ್ನು ಮಾಡುತ್ತಿದ್ದಾರೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡಿಗರು ಹಾಗೂ ಕನ್ನಡದ ರೈತರು ತೀವ್ರ ವಿರೋಧವಿದೆ. ಕೂಡಲೇ ಕೇಂದ್ರ ಸರ್ಕಾರ ಕರ್ನಾಟಕದಿಂದ ಅಮುಲ್ ಉತ್ಪಾದನಾ ಕರ್ನಾಟಕದ ಮೇಲೆ ಸಂಪೂರ್ಣವಾಗಿ ನಿಷೇಧಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರಕಾರದ ವಿರುದ್ದ ಹಾಗೂ ರಾಜ್ಯ ಸರ್ಕಾರದ ವಿರೋಧ ಉಗ್ರವಾದ ಹೋರಾಟ ಮಾಡಲು ಎಚ್ಚರಿಕೆ ಕೊಡುತ್ತಿದ್ದೇವೆ. ಹಾಗೂ ಅಮುಲ್ ಹಾಲು & ಮೊಸರು ಕ್ವಿಕ್ ಕಾಮರ್ಸ್ ಪ್ಲಾಟ್ ಫಾರ್ಮ್ ಮನೆ-ಮನೆಗೆ ತಲುಪಲು ಹೊರಾಟಿದೆ ಇದಕ್ಕೆ ಕನ್ನಡಿಗರಿಂದ ತೀವ್ರ ಅಕ್ರೋಶ ವ್ಯಕ್ತಿವಾಗಿದೆ. ಕರ್ನಾಟಕ ಹಾಲು ಮಹಾಮಂಡಲವು (ಕೆ.ಎಂ.ಎಫ್) ರಾಜ್ಯದ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಪೂರೈಸುತ್ತಿದೆ. ಕೆಎಂಎಫ್ ಹಾಲು ಅಮುಲ್ ಜೊತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದರು. ಅಮುಲ್ ಹಾಲು ಮೊಸರನ್ನು ರಾಜ್ಯದಲ್ಲಿ ಪರಿಚಯಿಸುವ ಸಲುವಾಗಿಯೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಯಾಗುತ್ತದೆ ಆದ್ದರಿಂದ ಕೂಡಲೇ ಇದನ್ನು ಕೈಬಿಡದಿದ್ದರೆ ಕೇಂದ್ರ ಸರ್ಕಾರದ ವಿರುದ್ದ & ರಾಜ್ಯ ಸರ್ಕಾರದ ವಿರುದ್ದ ಉಗ್ರವಾದ ಹೋರಾಟ ಮಾಡುತ್ತೇವೆಂದು ಕರವೇ ಎಚ್ಚರಿಕೆ ನೀಡುತ್ತದೆ.