ಅಮೀರ್ ಖಾನ್ ರ ’ಲಾಲ್ ಸಿಂಗ್ ಚಡ್ಡಾ’ ರೀಶೆಡ್ಯೂಲ್, ರಿಲೀಸ್ ಡೇಟ್ ಮತ್ತೆ ಪೋಸ್ಟ್ ಪೋನ್, ’ಕೆಜಿಎಫ್ ೨’ ಫಿಲ್ಮ್ ನ ಜೊತೆಗೂ ನೇರವಾಗಿ ಬಾಕ್ಸ್ ಆಫೀಸ್ ಸ್ಪರ್ಧೆ ಸಾಧ್ಯತೆ? ಗೊಂದಲದಲ್ಲಿದ್ದಾರೆ ಅಮೀರ್ ಖಾನ್!

ಅಮೀರ್ ಖಾನ್ ಅವರ ಬಹುನಿರೀಕ್ಷೆಯ ಫಿಲ್ಮ್ ’ಲಾಲ್ ಸಿಂಗ್ ಚಡ್ಡಾ’ ನಿರಂತರ ಪೋಸ್ಟ್ ಪೋನ್ ಆಗುತ್ತಿದೆ .ಕೊರೊನಾ ಕಾಲದ ನಂತರ ಈ ಫಿಲ್ಮ್ ನ್ನು ಮುಂದಿನ ವರ್ಷ೨೦೨೨ ರ ಫೆಬ್ರವರಿಯಲ್ಲಿ ರಿಲೀಸ್ ಮಾಡಲಾಗುವ ಘೋಷಣೆ ಮಾಡಲಾಗಿತ್ತು .
ಆದರೆ ಈಗ ಅಮೀರ್ ಖಾನ್ ರ ಲುಕ್ಕ್ ನ ಕಾರಣ ಫಿಲ್ಮ್ ರಿಲೀಸ್ ಮತ್ತೆ ಪೋಸ್ಟ್ ಪೋನ್ ಆಗಿದೆ. ಇತ್ತೀಚಿನ ಬಾಲಿವುಡ್ ಹಂಗಾಮ ವರದಿಯನುಸಾರ ಫಿಲ್ಮ್ ಲಾಲ್ ಸಿಂಗ್ ಚಡ್ಡಾ ಬಹು ಬಜೆಟಿನ ,ಹೊಸ ಆಧುನಿಕ ಟೆಕ್ನಾಲಜಿಯ ಫಿಲ್ಮ್ ಆಗಿದೆ .ಇದರಲ್ಲಿ ಡೀ ಏಜಿಂಗ್ ಟೆಕ್ನಾಲಜಿ ಮೂಲಕ ಕಡಿಮೆ ಪ್ರಾಯವನ್ನು ಮತ್ತು ಹೆಚ್ಚು ಪ್ರಾಯವನ್ನು ಸಮರ್ಥವಾಗಿ ತೋರಿಸಲಾಗುತ್ತದೆ .ಈ ಪ್ರೋಸೆಸ್ ನ್ನು ಪರ್ಫೆಕ್ಟ್ ಆಗಿಸಲು ಒಂದಷ್ಟು ಸಮಯ ಹಿಡಿಯಲಿದೆಯಂತೆ. ಇದಕ್ಕಿಂತ ಮೊದಲೂ ಈ ಟೆಕ್ನಾಲಜಿಯ ಬಳಕೆಯನ್ನು ಮಾಡಲಾಗಿತ್ತು. ಆದರೆ ಇಂದಿನ ಪ್ರೇಕ್ಷಕರಿಗೆ ಸ್ಕ್ರೀನ್ ನಲ್ಲಿ ವಿಶ್ವದರ್ಜೆಯ ಅನುಭವವನ್ನು ನೀಡಲು ಮೇಕರ್ಸ್ ಇಚ್ಛಿಸಿದ್ದಾರೆ.
ಫಿಲ್ಮ್ ನ್ನು ಮೇಕರ್ಸ್ ಮುಂದಿನ ವರ್ಷ ೧೮ ಫೆಬ್ರವರಿಗೆ ರಿಲೀಸ್ ಮಾಡಲು ಇಚ್ಚಿಸಿದ್ದರು. ಆದರೆ ಇದೀಗ ೨೦೨೨ರ ಏಪ್ರಿಲ್ ೧೪ ರಂದು ರಿಲೀಸ್ ಮಾಡಲು ಇಚ್ಛಿಸಿದ್ದಾರೆಂದು ಸುದ್ದಿಯಾಗಿದೆ. ವರದಿಯನುಸಾರ ಮೇಕರ್ಸ್ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಡುಗಡೆಯ ದಿನಾಂಕವನ್ನು ವಿಚಾರ ಮಾಡುತ್ತಿದ್ದಾರೆ . ಏಪ್ರಿಲ್ ೧೪ರಂದು ಒಂದು ತಾರೀಕು ಸಿಕ್ಕಿದೆ. ಆದರೆ ಲಾಲ್ ಸಿಂಗ್ ಚಡ್ಡಾ ಎಪ್ರಿಲ್ ೧೪ರಂದು ರಿಲೀಸ್ ಆದರೆ ಇದರ ನೇರ ಪ್ರಭಾವ ಬಾಕ್ಸಾಫೀಸ್ ನಲ್ಲಿ ಕನ್ನಡ ನಟ ಯಶ್ ಅವರ ಬಹುನಿರೀಕ್ಷೆಯ ಫಿಲ್ಮ್ ಕೆಜಿಎಫ್ ೨ರಲ್ಲಿ ತೀವ್ರ ಸ್ಪರ್ಧೆ ಏರ್ಪಡಲಿದೆ. ಯಾಕೆಂದರೆ ಕೆಜಿಎಫ್ ಮೊದಲ ಪಾರ್ಟ್ ನ ಕಲೆಕ್ಷನ್ ನಲ್ಲಿ ರೆಕಾರ್ಡ್ ಮುರಿದಿದೆ .ಹೀಗಾಗಿ ಅದೇ ಸಮಯ ಬಿಡುಗಡೆ ಆದರೆ ಲಾಲ್ ಸಿಂಗ್ ಚಡ್ಡಾ ಫಿಲ್ಮ್ ನ ಸಂಪಾದನೆಯಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ .
೧೪ ಏಪ್ರಿಲ್ ೨೦೨೨ರ ಹೊರತಾಗಿ ಮೇಕರ್ಸ್ ೨೮ ಏಪ್ರಿಲ್ ಗೆ ರಿಲೀಸ್ ಮಾಡುವ ವಿಚಾರವನ್ನೂ ಮಾಡುತ್ತಿದ್ದಾರೆ .ಆದರೆ ಆವಾಗ ಇದರ ಆಸುಪಾಸಿನಲ್ಲಿ ಅಜಯ್ ದೇವಗಣ್ ರ ’ಮೇ ಡೇ’ ಫಿಲ್ಮ್ ಏಪ್ರಿಲ್ ೨೯ ರಂದು ಮತ್ತು ಟೈಗರ್ ಶ್ರಾಫ್ ಅವರ ಫಿಲ್ಮ್ ’ಹೀರೋಪಂತೀ’ ಮೇ ೬ ರಂದು ರಿಲೀಸ್ ಆಗಲಿದೆ .ಈ ಫಿಲ್ಮ್ ಗಳು ಆವಾಗ ಸ್ಪರ್ಧೆ ನೀಡಬಹುದು.ಹಾಗಾಗಿ ಈ ಎಲ್ಲ ಕಿರಿಕಿರಿಯಿಂದ ಪಾರಾಗಲು ಅಮೀರ್ ಖಾನ್ ತನ್ನ ಸ್ನೇಹಿತ ಅಜಯ್ ದೇವಗಣ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಅವರ ಜೊತೆ ಮಾತುಕತೆ ನಡೆಸುತ್ತಿದ್ದಾರೆ .
ಒಂದು ವೇಳೆ ರಿಲೀಸ್ ಡೇಟ್ ಬದಲಿಸದಿದ್ದರೆ ಮತ್ತೆ ಗಂಗೂಬಾಯಿ ಕಾಠಿಯಾವಾಡಿ ಫಿಲ್ಮ್ ನ ಜೊತೆಗೆ ಸ್ಪರ್ಧೆ ನಡೆಯಲಿದೆ .ಈ ಫಿಲ್ಮ್ ಮೊದಲಿಗೆ ೬ ಜನವರಿ ೨೦೨೨ರಂದು ಸಿನಿಮಾ ಟಾಕೀಸುಗಳಲ್ಲಿ ರಿಲೀಸ್ ಆಗುವುದಿತ್ತು. ಆದರೆ ಈಗ ಅದು ಫೆಬ್ರವರಿ ೧೮ರಂದು ರಿಲೀಸ್ ಆಗಲಿದೆ. ಒಂದು ವೇಳೆ ಅಮೀರ್ ಖಾನ್ ಅವರ ಫಿಲ್ಮ್ ಪೋಸ್ಟ್ ಪೋನ್ ಆಗದಿದ್ದರೆ ಬಾಕ್ಸಾಫೀಸ್ ನಲ್ಲಿ ಅಲಿಯಾ ಅವರ ಗಂಗೂಬಾಯಿ… ಫಿಲ್ಮ್ ನ ಜೊತೆ ಅಲ್ಲಿಯೂ ಸ್ಪರ್ಧೆ ನಡೆಯಲಿದೆ .ಅಂತೂ ಅಮೀರ್ ಖಾನ್ ಈಗ ದೊಡ್ಡ ಗೊಂದಲದಲ್ಲಿ ಬಿದ್ದಿದ್ದಾರೆ.

ಸೋಶಿಯಲ್ ಮೀಡಿಯಾದಿಂದ ನಾಪತ್ತೆಯಾಗಿದ್ದ ಅನನ್ಯಾ ಪಾಂಡೆ ಮತ್ತೆ ಹಾಜರ್

ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ತನ್ನದೂ ಹೆಸರು ಕೇಳಿಬರುತ್ತಲೇ ಅನನ್ಯಾ ಪಾಂಡೆ ಸೋಶಿಯಲ್ ಮೀಡಿಯಾದಿಂದ ನಾಪತ್ತೆಯಾಗಿದ್ದರು.
ಕೆಲವು ದಿನಗಳ ನಂತರ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕೆ ಹಿಂತಿರುಗಿ ಬಂದಿದ್ದಾರೆ .ಅವರು ಇನ್ಸ್ಟ್ರಾಗ್ರಾಮ್ ನಲ್ಲಿ ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ.


ಈ ವೀಡಿಯೋದಲ್ಲಿ ಅನನ್ಯಾ ಕಾರಲ್ಲಿ ಕೂತು ಹೊರಗಡೆ ಪ್ರಕೃತಿಯನ್ನು, ಆಕಾಶವನ್ನು ನೋಡುತ್ತಿದ್ದಾರೆ .ಹೊರಗಡೆ ಆಕಾಶದಲ್ಲಿ ಕಾಮನಬಿಲ್ಲು ಕಾಣುತ್ತಿದೆ.
ಅನನ್ಯಾ ಅದರಲ್ಲಿ ಕ್ಯಾಪ್ಷನ್ ಬರೆದಿದ್ದಾರೆ- “ಹನಿ ಹನಿ ಮಳೆಯ ಹೊರತಾಗಿ ಕಾಮನಬಿಲ್ಲು ಕಂಡು ಬರಲಾರದು.” ಅನನ್ಯಾ ಅವರ ಈ ಪೋಸ್ಟ್ ಗೆ ಆಕೆಯ ತಾಯಿ ಭಾವನಾ ಪಾಂಡೆ ಕೂಡ ಕಾಮೆಂಟ್ ಮಾಡಿದ್ದಾರೆ. ಕಳೆದ ತಿಂಗಳು ಅನನ್ಯಾರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ವಿಚಾರಣೆಗೆ ತಮ್ಮ ಆಫೀಸಿಗೆ ಕರೆದಿದ್ದರು.ಎನ್ ಸಿ ಬಿ ಆಕೆಯ ಮನೆಗೆ ದಾಳಿಯನ್ನೂ ನಡೆಸಿತ್ತು. ಅನಂತರ ಆಕೆಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ದಿದ್ದರು. ಇದೆಲ್ಲ ಘಟನೆ ಎನ್ ಸಿ ಬಿ ಆರ್ಯನ್ ನನ್ನು ಬಂಧಿಸಿದ ನಂತರ ಆಗಿತ್ತು. ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆಯ ನಡುವೆ ಚ್ಯಾಟ್ ನ ಕೆಲವು ವಿವರಣೆಗಳು ಸಾರ್ವಜನಿಕವಾಗಿತ್ತು.

’ಪ್ರಥ್ವೀರಾಜ್’ ಫಿಲ್ಮ್ ನಲ್ಲಿ ’ಕಾಕಾ ಕನ್ಹ’ ಪಾತ್ರದಲ್ಲಿ ಸಂಜಯದತ್

ಅಕ್ಷಯಕುಮಾರ್ ರ ಫಿಲ್ಮ್ ಪ್ರಥ್ವೀರಾಜ್ ನ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನ ೫೮ನೇ ಸೆಕೆಂಡಿಗೆ ಒಂದು ಫ್ರೇಮ್ ನಲ್ಲಿ ಸಂಜಯದತ್ತ್ ಕಂಡುಬರುತ್ತಾರೆ .


ಆದರೆ ಸೈಡ್ ಪೋಸ್ ನಲ್ಲಿ .ಫಿಲ್ಮ್ ನಲ್ಲಿ ಸಂಜಯದತ್ ಅವರು ಪೃಥ್ವೀರಾಜ್ ಚೌಹಾಣ್ ಅವರ ಚಿಕ್ಕಪ್ಪನ ಪಾತ್ರದಲ್ಲಿದ್ದಾರೆ. ಅರ್ಥಾತ್ ಕಾಕಾ ಕನ್ಹ ಪಾತ್ರ.
ಈತನ ಮೀಸೆ ಬಹು ಖ್ಯಾತಿ.ಯಾರಾದರೂ ಮೀಸೆ ಮುಟ್ಟಿದರೂ ಸುಮ್ಮನಿರುತ್ತಿರಲಿಲ್ಲ.
ಕಾಕಾ ಕನ್ಹ ಅವರ ಯುದ್ಧ ವರ್ಣನೆಯ ಕವಿತೆಯೂ ಬಹು ಪ್ರಸಿದ್ಧವಿದೆ.