ಅಮೀರ್ ಖಾನ್ ಡೀಪ್‌ಫೇಕ್: ಎಫ್‌ಐಆರ್ ದಾಖಲು

ಮುಂಬೈ,ಏ.೧೮-ಹಲವು ಖ್ಯಾತನಾಮರ ನಿದ್ದೆ ಹಾಳು ಮಾಡಿರುವ ಡೀಪ್‌ಫೇಕ್ ತಂತ್ರ ಮತ್ತೊಮ್ಮೆ ಸದ್ದು ಮಾಡಿದೆ.
ಈ ಬಾರಿ ನಟ ಅಮೀರ್ ಖಾನ್ ಕೂಡ ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ ಮತ್ತು ಅವರ ನಕಲಿ ವೀಡಿಯೊವನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭೆ ಚುನಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಈ ಸಂದರ್ಭದಲ್ಲಿ ಅಮೀರ್ ಖಾನ್ ಅವರ ವಿಡಿಯೋವೊಂದು ವೈರಲ್ ಆಗಿದೆ.
ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿರುವ ನಟನ ವಿಡಿಯೋ ವೈರಲ್ ಆಗಿದೆ
ಈ ವಿವಾದಾತ್ಮಕ ಜಾಹೀರಾತು ಸೂಪರ್‌ಸ್ಟಾರ್ ಅಮೀರ್ ಖಾನ್ ಅವರನ್ನು ಒಳಗೊಂಡಿರುವ ಡೀಪ್‌ಫೇಕ್ ವೀಡಿಯೊವನ್ನು ಒಳಗೊಂಡಿದೆ. ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವಿಡಿಯೋ ತಯಾರಿಸಲಾಗಿದೆ.ವೀಡಿಯೋದಲ್ಲಿ ನಟನ ಜನಪ್ರಿಯ ದೂರದರ್ಶನ ಕಾರ್ಯಕ್ರಮ ಸತ್ಯಮೇವ್ ಜಯತೇಯ ದಶಕದ-ಹಳೆಯ ಸಂಚಿಕೆಯಲ್ಲಿನ ದೃಶ್ಯ ಒಳಗೊಂಡಿದೆ.
ಈ ವಿಡಿಯೋ ರಾಜಕೀಯ ಪಕ್ಷಕ್ಕೆ ತಳುಕು ಹಾಕಿಕೊಂಡಿದೆ .ಅಮೀರ್ ಧ್ವನಿಗೆ ಡಬ್ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಡೀಪ್‌ಫೇಕ್ ವೀಡಿಯೊದಲ್ಲಿ, ನಾಗರಿಕರ ಬ್ಯಾಂಕ್ ಖಾತೆಗಳಿಗೆ ೧೫ ಲಕ್ಷ ರೂಪಾಯಿ ಜಮಾ ಮಾಡುವ ಪಕ್ಷದ ಭರವಸೆಯನ್ನು ಅಮೀರ್ ಖಾನ್ ಟೀಕಿಸುವುದನ್ನು ಕಾಣಬಹುದು.
ಈ ವಿಚಾರವಾಗಿ ಅಮೀರ್ ಪೊಲೀಸರ ಮೊರೆ ಹೋಗಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಅಮೀರ್ ಮತ್ತು ತಂಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಅಮೀರ್ ಖಾನ್ ಪ್ರಕಟಿಸಿದ್ದಾರೆ .ನನ್ನ ೩೫ ವರ್ಷಗಳ ವೃತ್ತಿ ಜೀವನದಲ್ಲಿ ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡಿಲ್ಲ. ಈ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿರುವ ಬಗ್ಗೆ ಮುಂಬೈ ಪೊಲೀಸರ ಸೈಬರ್ ಸೆಲ್‌ಗೆ ಅಮೀರ್ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ಕಳೆದ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಪರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳನ್ನು ನಡೆಸಿದ್ದಾರೆ ಸಾಧ್ಯವಾದಷ್ಟೂ ಮತದಾನ ಮಾಡಲು ಪ್ರಯತ್ನಿಸಿದ್ದಾರೆ. ಅಮೀರ್ ಖಾನ್ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.