ಅಮೀರ್ ಖಾನ್ ಅವರ ’ಲಾಪತಾ ಲೇಡೀಸ್’ ಚಿತ್ರದಲ್ಲಿ ರವಿ ಕಿಶನ್ ೧೬೦ ಪಾನ್ ತಿಂದರು, ಒಂದೇ ದೃಶ್ಯದಲ್ಲಿ ೩೨ ಪಾನ್ ತಿಂದಿದ್ದರು!

ಅಮೀರ್ ಖಾನ್ ನಿರ್ಮಾಣದ ಚಿತ್ರ ’ಲಾಪತಾ ಲೇಡೀಸ್’ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳುವಾಗ, ರವಿ ಕಿಶನ್ ನಾನು ೧೬೦ ಪಾನ್ ತಿಂದಿದ್ದೇನೆ ಎಂದು ಹೇಳಿದರು.
ಲಾಪತಾ ಲೇಡೀಸ್‌ನಲ್ಲಿ ರವಿ ಕಿಶನ್: ಸುದೀರ್ಘ ಕಾಯುವಿಕೆಯ ನಂತರ ಅಮೀರ್ ಖಾನ್ ನಿರ್ಮಾಣದ ’ಲಾಪತಾ ಲೇಡೀಸ್’ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರವನ್ನು ಅಮೀರ್ ಖಾನ್ ಅವರ ಮಾಜಿ ಪತ್ನಿ ಮತ್ತು ನಿರ್ದೇಶಕರಾದ ಕಿರಣ ರಾವ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರಚಾರವು ಬಹಳ ಸಮಯದಿಂದ ನಡೆಯುತ್ತಿತ್ತು, ಅಂತಿಮವಾಗಿ ಇದು ಶನಿವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹೊಸ ನಟರು ಕಾಣಿಸಿಕೊಂಡಿದ್ದಾರೆ. ನಿತಾಂಶಿ ಗೋಯಲ್ ಫುಲ್ ಕುಮಾರಿಯ ಪಾತ್ರದಲ್ಲಿ ನಟಿಸಿದ್ದಾರೆ, ರವಿ ಕಿಶನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪರ್ಶ್ ಶ್ರೀವಾಸ್ತವ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ, ಅವರು ಈ ಮೊದಲು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ’ಲಾಪತಾ ಲೇಡೀಸ್’ ಒಂದು ಆಫ್‌ಬೀಟ್ ಚಲನಚಿತ್ರವಾಗಿದ್ದು, ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಒಂದು ಕುತೂಹಲಕಾರಿ ಕಥೆಯ ಬಗ್ಗೆ ತಿಳಿಯೋಣ.


ರವಿ ಕಿಶನ್ ೧೬೦ ಪಾನ್(ವೀಳ್ಯದೆಲೆ) ತಿಂದಿದ್ದಾರೆ:
ರವಿ ಕಿಶನ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಣದ ಆಸೆಗಾಗಿ ಆತ ಯಾರನ್ನಾದರೂ ಜೈಲಿಗೆ ಹಾಕಬಹುದು…..ಆತ ಕೇವಲ ತನ್ನ ಲಾಭವನ್ನು ಮಾತ್ರ ನೋಡುವ ಪೊಲೀಸ್ ಅಧಿಕಾರಿಯ ಪಾತ್ರ. ಆದರೆ ಒಮ್ಮೆ ಅವರು ಮದುವೆಯಾದ ಮಹಿಳೆಯನ್ನು ಆಕೆಯ ದುರಾಸೆಯ ಗಂಡನಿಂದ ರಕ್ಷಿಸಿದಾಗ ಅವರ ಆತ್ಮಸಾಕ್ಷಿಯು ಎಚ್ಚರಗೊಳ್ಳುತ್ತದೆ ಮತ್ತು ಆ ಮಹಿಳೆಯ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುತ್ತಾರೆ. ರವಿ ಕಿಶನ್ ಅವರ ವೀಡಿಯೊ ನೆಟ್‌ಫ್ಲಿಕ್ಸ್‌ನಲ್ಲಿ ಹರಿದಾಡುತ್ತಿದೆ, ಅದರಲ್ಲಿ ಅವರು ಈ ಚಿತ್ರದ ಸಂಪೂರ್ಣ ಶೂಟಿಂಗ್ ಸಮಯದಲ್ಲಿ ಸುಮಾರು ೧೬೦ ಪಾನ್ ತಿನ್ನಬೇಕಾದ ಸ್ಥಿತಿ ಬಂದಿತು ಎಂದು ಹೇಳಿದರು. ಇಷ್ಟೇ ಅಲ್ಲ, ಚಿತ್ರದ ನಾಯಕಿ ಫುಲ್ ಕುಮಾರಿ ನಾಪತ್ತೆಯಾದಾಗ ಮತ್ತು ನಾಯಕ ದೀಪಕ್ ರವಿ ಕಿಶನ್ ಬಳಿ ವರದಿ ಬರೆಯಲು ಹೋದ ಸಂದರ್ಭದಲ್ಲಿ ಆ ಒಂದು ದೃಶ್ಯವನ್ನು ಚಿತ್ರೀಕರಿಸುವಾಗಲೇ ೩೨ ವೀಳ್ಯದೆಲೆ ತಿಂದರಂತೆ. ಈ ದೃಶ್ಯವನ್ನು ಹಲವು ಕೋನಗಳಿಂದ ಚಿತ್ರೀಕರಿಸಿದ ಕಾರಣ ಅದೊಂದು ದೃಶ್ಯದಲ್ಲೇ ರವಿ ಕಿಶನ್ ಸುಮಾರು ೩೨ ಪಾನ್ ತಿನ್ನಬೇಕಾಯಿತಂತೆ .

ಮನೀಶಾ ಕೊಯಿರಾಲಾ ಮಾಧುರಿ ದೀಕ್ಷಿತ್‌ಗೆ ಹೆದರಿ ಯಶ್ ಚೋಪ್ರಾ ಅವರ ಫಿಲ್ಮ್ ತ್ಯಜಿಸಿದ ಕಾರಣವೇನಿತ್ತು? ಆ ಫಿಲ್ಮ್ ಯಾವುದು ಗೊತ್ತೇ?

ಅಷ್ಟಕ್ಕೂ ಯಶ್ ಚೋಪ್ರಾ ಅವರ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಕೂಡಾ ಇದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣವೇ ಮನೀಶಾ ಕೊಯಿರಾಲಾ ಅವರು ಆ ಸಿನಿಮಾ ಮಾಡಲು ನಿರಾಕರಿಸಿದ್ದು ನಿಮಗೆ ಗೊತ್ತೇ? ಮನೀಶಾ ಅವರು ಮಾಧುರಿಗೆ ಹೆದರಿದ್ದಕ್ಕೆ ಕಾರಣ ಏನು?
ಬಾಲಿವುಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಲು ಇಷ್ಟಪಡದ ಅನೇಕ ಸುಂದರಿಯರು ಇದ್ದಾರೆ. ಆದರೆ ಕೆಲವು ನಟಿಯರಲ್ಲಿ ’ಬೆಕ್ಕಿನಜಗಳ’ ಸಾಮಾನ್ಯವಾಗಿದೆ.
ಮನೀಶಾ ಕೊಯಿರಾಲಾ ’ಹೀರಾಮಂಡಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಮನಿಶಾ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ಅವರ ’ಹೀರಾಮಂಡಿ’ ಸರಣಿಯಲ್ಲಿ ಕೆಲಸ ಮಾಡಿದ್ದಾರೆ. ಈ ಸರಣಿಯಲ್ಲಿ ಅವರು ಪ್ರಮುಖ ನಟಿಯ ಪಾತ್ರವನ್ನು ನಿರ್ವಹಿಸಿದ್ದಾರೆ.


ಯಶ್ ಚೋಪ್ರಾ ಅವರ ಸಿನಿಮಾದಲ್ಲಿ ಕೆಲಸ ಮಾಡದಿದ್ದಕ್ಕೆ ವಿಷಾದವಿದೆ ಎನ್ನುತ್ತಾರೆ ಮನೀಶಾ:
ಯಶ್ ಚೋಪ್ರಾ ಅವರ ಚಿತ್ರದಲ್ಲಿ ಕೆಲಸ ಮಾಡದಿದ್ದಕ್ಕೆ ಮನೀಶಾ ಕೊಯಿರಾಲಾ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾಧುರಿ ದೀಕ್ಷಿತ್ ಆ ಚಿತ್ರದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಯಶ್ ಚೋಪ್ರಾರ ಆ ಚಿತ್ರವನ್ನು ತಾನು ನಿರಾಕರಿಸಿದ್ದೆ ಎಂದು ಮನೀಶಾ ಹೇಳಿದ್ದಾರೆ. ಇದು ಅವರ ಈವರೆಗಿನ ಚಿತ್ರರಂಗದ ದೊಡ್ಡ ತಪ್ಪು ಆಗಿತ್ತು ಎಂದರು. ಆ ಚಿತ್ರ ಯಾವುದೆಂದರೆ ಕರಿಷ್ಮಾ ಕಪೂರ್ ನಂತರ ಆ ಪಾತ್ರ ಮಾಡಿದ ’ದಿಲ್ ತೋ ಪಾಗಲ್ ಹೈ’ ಚಿತ್ರವಾಗಿದೆ .
ಮನೀಶಾ ಯಾಕೆ ಹೆದರಿದರು?ಅಷ್ಟಕ್ಕೂ ಯಶ್ ಚೋಪ್ರಾ ಅವರ ಸಿನಿಮಾದಲ್ಲಿ ಮನಿಶಾ ಯಾಕೆ ಕೆಲಸ ಮಾಡಲಿಲ್ಲ?
ಅಲ್ಲಿನ ತನ್ನ ಭಯ ಮತ್ತು ಮಾಧುರಿ ದೀಕ್ಷಿತ್‌ರಿಂದ ತಪ್ಪಿಸಿ ತಾನು ಓಡಿಹೋದ ಕಾರಣವನ್ನು ವಿವರಿಸಿದ ಮನಿಶಾ ಕೊಯಿರಾಲಾ, ಆ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ವಿರುದ್ಧವಾಗಿ ತನ್ನ ಪಾತ್ರವಿತ್ತು ಮತ್ತು ಅದಕ್ಕೆ ನಾನು ತುಂಬಾ ಹೆದರಿದ್ದೆ ಎಂದು ಹೇಳಿದರು. ಪರಿಣಾಮವಾಗಿ, ಅವರು ಈ ಯೋಜನೆಯನ್ನೇ ಕೈಬಿಟ್ಟರು. ತನ್ನ ಅಭದ್ರತೆಯ ಕಾರಣದಿಂದ ಈ ರೀತಿ ಮಾಡಿದ್ದೇನೆ ಎಂದು ಮನೀಶಾ ಹೇಳಿದ್ದಾರೆ.


’ಲಜ್ಜಾ’ದಲ್ಲಿ ಮಾಧುರಿ ಜೊತೆ ಕೆಲಸ ಮಾಡಿದ್ದಾರೆ:
ಅದರ ನಂತರ ತನ್ನ ಅಭದ್ರತೆಯಿಂದ ಹೊರಬಂದ ಮನಿಶಾ ಕೊಯಿರಾಲಾ ಮಾಧುರಿ ದೀಕ್ಷಿತ್ ಅವರೊಂದಿಗೆ ’ಲಜ್ಜಾ’ ಚಿತ್ರದಲ್ಲಿ ಕೆಲಸ ಮಾಡಿದರು. ಈ ಘಟನೆಯ ಹಲವು ವರ್ಷಗಳ ನಂತರ, ರಾಜ್ ಸಂತೋಷಿ ಅವರು ತನಗೆ ’ಲಜ್ಜಾ’ ಚಿತ್ರವನ್ನು ಆಫರ್ ಮಾಡಿದಾಗ, ಯಶ್ ಚೋಪ್ರಾ ಅವರ ಚಿತ್ರದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಲು ಬಯಸದೆ ತಕ್ಷಣ ಒಪ್ಪಿಕೊಂಡೆ ಎಂದು ಮನೀಶಾ ಹೇಳಿದರು.
ಅಂದು ದೊಡ್ಡ ಪ್ರಾಜೆಕ್ಟ್ ಕೈ ಬಿಟ್ಟಿದ್ದು ನನ್ನ ದೊಡ್ಡ ತಪ್ಪು ಆಗಿದೆ ಎಂದೂ ಮನಿಶಾ ಹೇಳಿದ್ದಾರೆ. ಇದು ನನ್ನ ವೃತ್ತಿಜೀವನದಲ್ಲಿ ಒಂದು ಹೆಗ್ಗುರುತು ಚಿತ್ರವಾಗಬಹುದಿತ್ತು, ಆದರೆ ನನ್ನ ತಪ್ಪುಗಳನ್ನು ಮತ್ತೆ ಪುನರಾವರ್ತಿಸಲು ನಾನು ಬಯಸುವುದಿಲ್ಲ. ‘ಲಜ್ಜಾ’ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದರು.
ಮನೀಶಾ ಮಾಧುರಿಯ ಕುರಿತೂ ಮಾತನಾಡಿದರು:
ಮಾಧುರಿ ಬಗ್ಗೆ ಮನೀಶಾ ಕೊಯಿರಾಲಾ ಅವರು ಮಾತನಾಡುತ್ತಾ ಮಾಧುರಿಯವರು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ತುಂಬಾ ಒಳ್ಳೆಯ ನಟಿ ಎಂದು ಹೇಳುತ್ತಾರೆ. ತಾನು ಅವರೊಂದಿಗೆ ಅಸುರಕ್ಷಿತವಳಾಗಿರಬೇಕಾಗಿಲ್ಲ. ನಿಮ್ಮ ಮುಂದೆ ಒಬ್ಬರು ಸಶಕ್ತ ಕಲಾವಿದರಿದ್ದರೆ, ನಿಮ್ಮ ಅಭಿನಯವು ಸ್ವಯಂಚಾಲಿತವಾಗಿ ಸುಧಾರಿಸುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಈ ವಿಷಯವು ವಯಸ್ಸು ಮತ್ತು ಅನುಭವದೊಂದಿಗೆ ನಮಗೆ ಬರುತ್ತದೆ. ಮಾಧುರಿ ಅವರೊಂದಿಗೆ ಕೆಲಸ ಮಾಡುವುದನ್ನು ನಾನು ನಿಜವಾಗಿಯೂ ಆನಂದಿಸಿದೆ ಎಂದರು ಮನೀಶಾ.
ಹೀರಾಮಂಡಿ ಸರಣಿಯಲ್ಲಿ ಮನೀಶಾ ಕೊಯಿರಾಲ ಮಲ್ಲಿಕಾಜಾನ್ ಪಾತ್ರವನ್ನು ನಿರ್ವಹಿಸುತ್ತಾರೆ., ಅವಳು ವೇಶ್ಯೆಯರ ಮನೆಯನ್ನು ಆಳುವ ಮತ್ತು ನಿರ್ಭೀತ ಮಹಿಳೆ ಆಗಿರುತ್ತಾಳೆ.