ಅಮಿಷಗಳಿಗೆ ಬಲಿಯಾಗದೆ ಬಿಜೆಪಿಗೆ ಮತ ನೀಡಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ನಗರದ  ಎರಡು ಮತ್ತು ಮೂರನೇ ವಾರ್ಡಿನ ಮದ್ದಾನ ಸ್ವಾಮಿ ಮಟ , ಮ್ಯಾದಾರ ಕಾಲೋನಿ, ಕಸಾಯಿ ಗಲ್ಲಿ , ಗೌಳೇರ ಹಟ್ಟಿ  , ತಿರುಮಲ ಕೇರಿ, ಲಾಲ ಕಾಮನ್ , ಬಾಲಾಂಜನೇಯ ದೇವಸ್ಥಾನ ಬೀದಿ ,ಕಾಂಡ್ರ ಸಿದ್ದಪ್ಪ ಬೀದಿ , ಗಣೇಶ್ ಬೀದಿ ,  ತೇರು ಬೀದಿಯಲ್ಲಿ ಇಂದು ನಗರ ಶಾಸಕರೂ ಆಗಿರುವ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಅವರು ಮತಯಾಚನೆ ಮಾಡಿದರು.
ಅವರೊಂದಿಗೆ ಪಾಲಿಕೆ ಸದಸ್ಯ ಕೆ.ಈರಮ್ಮ, ಮುಖಂಡರಾದ ಸುರೇಂದ್ರ, ವಸಂತರಾವ್, ಸೂರಿ, ಭಾಸ್ಕರ್, ಮಾರುತಿ, ಭರತ್, ಶಂಕರ್ ಮೊದಲಾದವರು ಶಾಸಕರ ಜೊತೆ  ಪಾಲ್ಗೊಂಡು ಪ್ರಚಾರ ನಡೆಸಿದರು.
ಶಾಸಕರು ಮತದಾರರಿಗೆ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನನಗೆ ಮತ ನೀಡಿ. ಬಾಕಿ ಇರುವ ಅಭಿವೃದ್ಧಿ ಯೋಜನೆಗಳ ಅನುಷ್ಟಾನಕ್ಕೆ ಸಹಕಾರಿ ಆಗಲಿದೆ. ಮತದಾನದ ಅಮಿಷಗಳಿಗೆ ಬಲಿಯಾಗಬೇಡಿ ಎಂದರು.ನಾಳೆ ದಿನ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದು ತಾವು ಆಗಮಿಸಿ ಎಂದರು.