ಗಬ್ಬೂರು,ಮಾ.೨೫- ದೇಶದ ರಾಜಕೀಯ ಚಾಣಕ್ಯ ಹಾಗೂ ಕೇಂದ್ರ ಗೃಹ ಸಹಕಾರ ಸಚಿವರಾದ ಅಮಿತ್ ಶಾ ಕಲ್ಯಾಣ ಕರ್ನಾಟಕದ ಎಡೆದೊರೆ ನಾಡಿನ ಗಬ್ಬೂರು ಪಟ್ಟಣಕ್ಕೆ ನಾಳೆ ಎಂಟ್ರಿ ನೀಡಲಿದ್ದಾರೆ.
ರಾಯಚೂರು ಜಿಲ್ಲೆಯ ಹಿಂದೂಳಿದ ದೇವದುರ್ಗ ತಾಲೂಕಿನ ಸಾವಿರಾರು ಕೋಟಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಮುಂದಾಗಿದ್ದಾರೆ. ಅಮಿತ್ ಶಾ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ಸಿದ್ಧವಾಗಿದೆ.
ನಾಳೆ ಕೇಂದ್ರ ಗೃಹ ಸಚಿವ ಇದೆ ಮೊದಲ ಬಾರಿಗೆ ಗಬ್ಬೂರು ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.ಹೀಗಾಗಿ ಅಮಿತ್ ಶಾ ಆಗಮನಕ್ಕಾಗಿ ರಾಯಚೂರಿನ ಜನ ಕಾತರದಿಂದ ಕಾಯುತ್ತಿದ್ದಾರೆ.ದೇವದುರ್ಗ ತಾಲೂಕಿನ ಗಬ್ಬೂರು ಪಟ್ಟಣಕ್ಕೆ ೨೬ ನೇ ತಾರೀಖು ಭಾನುವಾರ ಅಮಿತ್ ಶಾ ಎಂಟ್ರಿ ನೀಡಲಿದ್ದಾರೆ.
ಗಬ್ಬೂರಿನಲ್ಲಿ ನಿರ್ಮಾಣ ಮಾಡಿರುವ ಹೆಲಿಫ್ಯಾಡ್‌ಗೆ ಬಂದಿಳಿಯಲಿದ್ದಾರೆ.ಅಮಿತ್ ಶಾ ಜೊತೆಗೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ಜನ ಸಚಿವರು ಹಾಗೂ ಶಾಸಕರು ಬರಲಿದ್ದಾರೆ.ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಗಬ್ಬೂರು ಪಟ್ಟಣದಲ್ಲಿ ಭವ್ಯವಾದ ವೇದಿಕೆಯನ್ನ ನಿರ್ಮಾಣ ಮಾಡಲಾಗಿದೆ.