ಅಮಿತಾ ಶಾ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ

ಗಬ್ಬೂರು,ಮಾ.೨೭- ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಗಬ್ಬೂರು ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.ಸುಮಾರು ೬೦೦ ಕೋಟಿ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮಕ್ಕೆ ನೆರವೇರಿಸಿದ್ದ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಂದಲೇ ಈಗ ಉದ್ಘಾಟನೆ ಮತ್ತಷ್ಟು ಕಳೆ ಮೂಡಿಸಿತ್ತು.
ನಿಜಾಮ ಆಡಳಿತದ ರಜಾಕಾರರ ಹಾವಳಿಗೆ ತತ್ತರಿಸಿ ಹೋಗಿದ್ದ ಗಬ್ಬೂರು ಪಟ್ಟಣದ ಹೊರವಲಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸಾವಿರಾರು ಜನಸಂಖ್ಯೆಯಲ್ಲಿ ಜನರು ಸೇರಿದ್ದರು.
ವೇದಿಕೆಗೆ ಅಮಿತ್ ಶಾ ಆಗಮಿಸುತ್ತಲೇ ಕಿಕ್ಕಿರಿದು ಸೇರಿದ್ದ ಜನಸ್ತೋಮದ ಜೈ ಘೋಷ ಸದ್ದು ಮುಗಿಲು ಮುಟ್ಟಿತ್ತು.
ಕಾರ್ಯಕ್ರಮದಲ್ಲಿ ಸಚಿವ ಭಗವಂತ ಖೂಬಾ, ಸಂಸದ ರಾಜ ಅಮರೇಶ ನಾಯಕ, ಶಾಸಕ ಶಿವರಾಜ ಪಾಟೀಲ್,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್,ಕಾಡಾ ಅಧ್ಯಕ್ಷ ಕೊಲ್ಲ ಶೇಷಗಿರಿ ರಾವ್, ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ ಸಿಇಒ ಶಶಿಧರ ಕೂರೇರ್, ಅಪಾರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣನವರ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.