ಅಮಿತಾಭ್ ರಿಂದ ಸಲ್ಮಾನ್ ಖಾನ್ ತನಕ ಶ್ವಾನಪ್ರಿಯ ಬಾಲಿವುಡ್ ನಟನಟಿಯರು

ಬಾಲಿವುಡ್ ನ ಅನೇಕ ನಟನಟಿಯರು ತಮ್ಮ ದುಬಾರಿ ಮತ್ತು ಲಕ್ಸುರಿ ಲೈಫ್ ಸ್ಟೈಲ್ ನಡುವೆಯೂ ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಸೆಲೆಬ್ಸ್ ಗಳು ತಮ್ಮ ಲೈಫ್ ಸ್ಟೈಲ್ ಹೊರತಾಗಿ ತಮ್ಮ ಸಾಕುನಾಯಿಗಳಿಗೂ ಬಹಳಷ್ಟು ಖರ್ಚು ಮಾಡುತ್ತಾರೆ. ನ್ಯಾಷನಲ್ ಪೆಟ್ ಡೇ ಸಂದರ್ಭದಲ್ಲಿ ಕೆಲವು ನಟ-ನಟಿಯರ ಸಾಕುನಾಯಿಗಳ ಕುರಿತು ಚರ್ಚೆಯಾಗಿದೆ.

ಅಮಿತಾಭ್ ಬಚ್ಚನ್:

ಬಾಲಿವುಡ್ ನ ಮಹಾನಾಯಕ ಅಮಿತಾಭ್ ಬಚ್ಚನ್ ಅನೇಕ ವರ್ಷಗಳ ಮೊದಲು ಸಾಕುನಾಯಿಯೊಂದನ್ನು ಪರಿವಾರದ ಸದಸ್ಯರನ್ನಾಗಿಸಿದ್ದರು.ಅದರ ಹೆಸರು ಶಾನೌಕ್.
ಬಿಗ್-ಬಿ ತನ್ನ ಸಾಕುನಾಯಿಯನ್ನು ಬಹಳಷ್ಟು ಹಚ್ಚಿಕೊಂಡಿದ್ದಾರೆ.ಇದು ಗ್ರೇಡ್ ಡೆನ್ ಪ್ರಜಾತಿಯ ಶ್ವಾನ ಆಗಿತ್ತು.ಈ ಶ್ವಾನವನ್ನು ಬಿಗ್ ಬಿ ೨೦೦೬ ರಲ್ಲಿ ಖರೀದಿಸಿದ್ದರು.ಇದು ೨೦೧೩ ರಲ್ಲಿ ಸಾವನ್ನಪ್ಪಿತು.ಈ ಜಾತಿಯ ಶ್ವಾನಕ್ಕೆ ೫೦ ಸಾವಿರದಿಂದ ೧ ಲಕ್ಷ ರೂ.ತನಕ ಬೆಲೆ ಇರುತ್ತದೆ.ಇದನ್ನು ಸಾಕಲು ತಿಂಗಳಿಗೆ ಹತ್ತು ಸಾವಿರ ರೂ.ತನಕ ಖರ್ಚು ಇದೆ.

ಸಲ್ಮಾನ್ ಖಾನ್:

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ರ ಬಳಿ ಎರಡು ಫ್ರೆಂಚ್ ಮಾಸ್ಟಿಫ್ ಶ್ವಾನಗಳು ಇದ್ದುವು.ಇದರ ಹೆಸರು ಮೈಸನ್ ಮತ್ತು ಮೈಜಾನ್.
ಈ ಎರಡೂ ಶ್ವಾನಗಳ ಸಾವಿನ ನಂತರ ಮಹಬೂಬ್ ಸ್ಟುಡಿಯೋ ಬಳಿ ಇವುಗಳ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.ಈ ಶ್ವಾನಗಳಲ್ಲಿ ಪ್ರತಿಯೊಂದರ ಬೆಲೆ ೬೩ ಸಾವಿರ ರೂಪಾಯಿ ಇತ್ತು .ಇದಲ್ಲದೇ ಸಲ್ಮಾನ್ ಖಾನ್ ಅವರ ಬಳಿ ಒಂದು ಸೆಂಟ್ ಬರ್ನಾರ್ಡ್ ಕೂಡ ಇದೆ. ಈ ಶ್ವಾನದ ಬೆಲೆ ೯೦ ಸಾವಿರ ರೂಪಾಯಿ. ಈ ಶ್ವಾನಗಳನ್ನು ಸಾಕಲು ಸಲ್ಮಾನ್ ಪ್ರತಿತಿಂಗಳು ಐವತ್ತು ಸಾವಿರ ರೂಪಾಯಿ ತನಕ ಖರ್ಚು ಮಾಡುತ್ತಾರೆ.

ಶಾರೂಖ್ ಖಾನ್:

ಬಾಲಿವುಡ್ ನ ಬಾದಶಾಹ ಶಾರುಖ್ ಖಾನ್ ಸದಾ ಶ್ವಾನ ಪ್ರಿಯರು. ಇವರ ಬಳಿ ಡ್ಯಾಶ್ ಹೆಸರಿನ ಶ್ವಾನ ಇತ್ತು .೨೦೧೫ರಲ್ಲಿ ಇದು ಸಾವನ್ನಪ್ಪಿತು. ಇಂತಹ ಶ್ವಾನಗಳ ಬೆಲೆ ೪೦ರಿಂದ ೮೦ ಸಾವಿರ ರೂಪಾಯಿ. ಸದ್ಯ ಶಾರುಖ್ ಬಳಿ ಒಂದು ಲ್ಯಾಬ್ರಾಡಾರ್ ಮತ್ತು ೨ ಮಾಲ್ಟೀಜ್ ಶ್ವಾನಗಳಿವೆ. ತಮ್ಮ ಸುಂದರ ಶ್ವಾನ ಗಳ ಮೇಲೆ ಶಾರುಕ್ ಪ್ರತಿತಿಂಗಳು ೩೦ ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ.

ಜ್ಯಾಕ್ಲಿನ್ ಫೆರ್ನಾಂಡಿಸ್:

ಬಾಲಿವುಡ್ ನಟಿಯರಲ್ಲಿ ಈಕೆ ಒಂದು ರೀತಿಯಲ್ಲಿ ಇಂಡಸ್ಟ್ರಿಯ ಬಹಳ ದೊಡ್ಡ ಎನಿಮಲ್ ಲವರ್.
ಜಾಕ್ಲಿನ್ ಫೆರ್ನಾಂಡೀಸ್ ರ ಶ್ರೀಲಂಕಾದ ಮನೆಯಲ್ಲಿ ಏಳು ಶ್ವಾನಗಳು ,ಎರಡು ಬೆಕ್ಕುಗಳು, ೫ ಫಿಶ್ ಟ್ಯಾಂಕ್ ಇವೆ .ಎಲ್ಲ ಜಾನುವಾರುಗಳ ಮತ್ತು ಫಿಶ್ ಗಳ ಬೆಲೆ ೨ ಲಕ್ಷರೂಪಾಯಿ ಎನ್ನಲಾಗಿದೆ. ಪ್ರತಿತಿಂಗಳು ನಟಿ ಇವುಗಳಿಗಾಗಿ ೫೦ರಿಂದ ೬೦ ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ.

ಶಿಲ್ಪಾ ಶೆಟ್ಟಿ:

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಾಣಿಪ್ರಿಯರು ಇವರ ಬಳಿ ಒಂದು ಸುಂದರ ಶ್ವಾನ ಇದೆ .ಇದರ ಹೆಸರನ್ನು ಶಿಲ್ಪಾ ಅವರು ಶ್ಯಾಂಪೆನ್ ಎಂದಿರಿಸಿದ್ದಾರೆ. ಈ ಶ್ವಾನದ ಹೊರತಾಗಿ ಶಿಲ್ಪಾ ಶೆಟ್ಟಿ ಅವರ ಬಳಿ ಎರಡು ಪರ್ಷಿಯನ್ ಬೆಕ್ಕು ಗಳಿವೆ .ಈ ಬೆಕ್ಕುಗಳ ಬೆಲೆ ೪೦ ಸಾವಿರ ರೂಪಾಯಿ. ಶಿಲ್ಪಾ ಪ್ರತೀತಿಂಗಳು ಜಾನುವಾರುಗಳಿಗೆ ಸ್ಪಾ ಮತ್ತು ಆಹಾರ ಇತ್ಯಾದಿಗಳಿಗೆ ಹಲವು ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ.

ಪ್ರಿಯಾಂಕ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಅವರು ಕಳೆದ ವರ್ಷ ೨೦೨೦ ರಲ್ಲಿ ಪಾಂಡಾ ಹೆಸರಿನ ಒಂದು ಶ್ವಾನವನ್ನು ದತ್ತು ತೆಗೆದುಕೊಂಡಿದ್ದಾರೆ .ಈ ಶ್ವಾನವನ್ನು ಪ್ರಿಯಾಂಕಾ ಅವರು ಪತಿ ನಿಕ್ ಜೋನಸ್ ಅವರಿಗೆ ಗಿಫ್ಟ್ ನೀಡಿದ್ದಾರೆ. ಇದೊಂದು ರೆಸ್ಕ್ಯೂ ಡಾಗ್. ಇದರ ಹೊರತಾಗಿ ಪ್ರಿಯಾಂಕಾ ಚೋಪ್ರಾರ ಬಳಿ ಡಾಯನಾ ಹೆಸರಿನ ಇನ್ನೊಂದು ಶ್ವಾನವಿದೆ. ಇದರ ಇನ್ಸ್ಟ್ರಾಗ್ರಾಮ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿದ್ದಾರೆ. ಡಾಯನಾ ಶ್ವಾನಕ್ಕೆ ದುಬಾರಿ ಬೆಲೆಯ ಡಿಸೈನರ್ ಬಟ್ಟೆತೊಡಿಸುತ್ತಾರೆ .ಕೆಲವು ದಿನಗಳ ಮೊದಲು ಡಾಯನಾ ಶ್ವಾನದ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಭರ್ಜರಿ ವೈರಲ್ ಆಗಿದೆ.ಇದಕ್ಕೆ ೩೫೦೦೦ ರೂಪಾಯಿ ಬೆಲೆಯ ಜಾಕೆಟ್ ತೊಡಿಸಿದ್ದರು.

ಸೋಶಲ್ ಮೀಡಿಯಾದಲ್ಲಿ ಮಲೈಕಾ ಅರೋರಾ ಕೈಬೆರಳಲ್ಲಿ ಉಂಗುರದ ಫೋಟೋ: ಅಭಿಮಾನಿಗಳು ಕೇಳಿದರು- ಅರ್ಜುನ್ ಕಪೂರ್ ಜೊತೆ ನಿಶ್ಚಿತಾರ್ಥ?!

ಮಲೈಕಾ ಅರೋರಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಕೈಯಲ್ಲಿ ಒಂದು ಉಂಗುರ ಎದ್ದುಕಾಣುತ್ತದೆ. ಇದನ್ನು ಗಮನಿಸಿದ ಫ್ಯಾನ್ಸ್ ಗಳು ಅರ್ಜುನ್ ಕಪೂರ್ ಜೊತೆಗಿನ ನಿಶ್ಚಿತಾರ್ಥದ ಸುದ್ದಿಯನ್ನು ಚರ್ಚೆ ಮಾಡುತ್ತಿದ್ದಾರೆ.
ಮಲೈಕಾರ ಬೆರಳಲ್ಲಿ ಸುಂದರವಾದ ಒಂದು ಉಂಗುರ ಇರುವುದು ಕಾಣಿಸುತ್ತದೆ. ಇದನ್ನು ಗಮನಿಸಿದ ಸೋಶಿಯಲ್ ಮೀಡಿಯಾದ ಯೂಸರ್ ಗಳು ಅವರಿಗೆ ಶುಭಾಶಯವನ್ನೂ ಕೋರಿದ್ದಾರೆ!.


ಆದರೆ ಇದರ ಸತ್ಯ ಸಂಗತಿ ಬೇರೆಯೇ ಇದೆ!
ವಿಶೇಷ ಅಂದರೆ ಮಲೈಕಾ ಈ ಫೋಟೋವನ್ನು ಒಂದು ಜುವೆಲ್ಲರಿ ಬ್ರಾಂಡ್ ನ ಪ್ರಮೋಷನ್ ಪ್ರಯುಕ್ತ ಹಾಕಿದ್ದಾರೆ. ಅದರ ಕೆಳಗಡೆ ಒಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ.
ಮಲೈಕಾ ಅದರಲ್ಲಿ ಬರೆದಿದ್ದಾರೆ–
“ಎಷ್ಟೊಂದು ಸುಂದರವಾದ ಉಂಗುರ ಇದು. ಖುಷಿಯ ಆರಂಭ ಇಲ್ಲಿಂದಲೇ ಆಗುತ್ತದೆ.”
ಇದರ ನಂತರ ಉಂಗುರದ ಬ್ರಾಂಡ್ ಅನ್ನು ಟ್ಯಾಗ್ ಮಾಡಿದ್ದಾರೆ. ಹಾಗೂ “ಇಲ್ಲಿ ವಿವಾಹ ನಿಶ್ಚಿತಾರ್ಥದ ಉತ್ತಮ ಉಂಗುರಗಳು ದೊರೆಯುತ್ತದೆ. ಈ ಕಂಪನಿಯಿಂದ ಇಂತಹ ಉಂಗುರಗಳನ್ನು ಆಸಕ್ತರು ಖರೀದಿಸಬಹುದು”. ಕಳೆದ ವರ್ಷ ಮಲೈಕಾ ಅರೋರಾ ಅವರು ನೇಹಾ ಧೂಪಿಯಾರ ಚಾಟ್ ಶೋ ’ನೋ ಫಿಲ್ಟರ್ ನೇಹಾ ೪’ ಇದರಲ್ಲಿ ಅರ್ಜುನ್ ಜೊತೆಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. “ನಮ್ಮ ಕ್ರಿಶ್ಚನ್ ರೀತಿಯ ವೆಡ್ಡಿಂಗ್ ಸೆರೆಮನಿ ಬೀಚ್ ನಲ್ಲಿ ನಡೆಯುವುದು”. ಎಂದಿದ್ದರು.