ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಲು ಇರ್ಫಾನ್ ಖಾನ್ ರ ಮಗ ಬಾಬಿಲ್ ಗೆ ಇಚ್ಛೆ

ದಿವಂಗತ ನಟ ಇರ್ಫಾನ್ ಖಾನ್ ರ ಮಗ ಬಾಬಿಲ್ ಶೀಘ್ರವೇ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ. ಅವರು ’ಕಾಲಾ’ ಫಿಲ್ಮ್ ನ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ. ಅಭಿನಯದ ಜೊತೆಗೆ ಬಾಬಿಲ್ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯರಾಗಿದ್ದಾರೆ. ತನ್ನ ತಂದೆಯವರ ಜೊತೆಗಿನ ಅನೇಕ ನೆನಪುಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ತನ್ನ ತಂದೆ ಮತ್ತು ಅಮಿತಾಭ್ ಇರುವ ಅಪರೂಪದ ಒಂದು ಫೋಟೋವನ್ನು ಶೇರ್ ಮಾಡಿದ್ದಾರೆ .ಈ ಫೋಟೋದಲ್ಲಿ ಇರ್ಫಾನ್ ಖಾನರನ್ನು ಅಮಿತಾಭ್ ಬಚ್ಚನ್ ಅಪ್ಪಿಕೊಳ್ಳುವ ದೃಶ್ಯವಿದೆ.


ಈ ಫೋಟೋದ ಜೊತೆ ಬಾಬಿಲ್ ಒಂದು ಇಮೋಷನಲ್ ನೋಟ್ ಕೂಡ ಬರೆದಿದ್ದಾರೆ. “ನಾನು ಬಹಳ ಶೀಘ್ರವೇ ಟೆನ್ಶನ್ ಮಾಡಿಕೊಳ್ಳುತ್ತೇನೆ, ಹಾಗೂ ನನಗೆ ನಾನೇ ಸುಲಭವಾಗಿ ಗಾಯ ಮಾಡಿಕೊಳ್ಳುತ್ತೇನೆ, ನಂತರ ನನಗೆ ಸಿಟ್ಟು ಬರುತ್ತದೆ, ಕೊನೆಗೆ ನನಗೆ ಮನವರಿಕೆಯಾಗುವುದು ತಂದೆಯವರ ( ಬಾಬಾ)ಫ್ಯಾನ್ಸ್ ದಯಾಮಯಿ ಆಗಿರುವರು ಎಂದು. ಹೀಗಾಗಿ ದ್ವೇಷವನ್ನು ಬದಿಗೆ ಇಡಬೇಕು.ಒಂದು ದಿನ ನಾನು ನನ್ನ ಶ್ರಮದಿಂದ ಯಶಸ್ಸನ್ನು ಸಾಧಿಸಬಲ್ಲೆ. ಆವಾಗ ನನ್ನ ತಂದೆಯವರ ಫ್ಯಾನ್ಸ್ ಗಳು ನನ್ನ ಬಗ್ಗೆ ಹೆಮ್ಮೆ ಪಡಬಹುದು. ಐ ಲವ್ ಯು. ಒಂದು ದಿನ ಖಂಡಿತ ನಿಮ್ಮ ಜೊತೆ ನಾನು ಕೆಲಸ ಮಾಡಬಹುದು ಅಮಿತಾಬ್ ಬಚ್ಚನ್ ಸರ್” ಎಂದಿದ್ದಾರೆ.

ಕ್ವಾರಂಟೈನ್ ನಲ್ಲಿ ಅರ್ಜುನ್ ರಾಮ್ ಪಾಲ್ ಅವರಿಂದ ಪೈಂಟಿಂಗ್

ನಟ ಅರ್ಜುನ್ ರಾಮ್ ಪಾಲ್ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿದ್ದರು. ಕೋವಿಡ್ ಪಾಸಿಟಿವ್ ವರದಿ ಬಂದ ನಂತರ ಅವರು ಮನೆಯಲ್ಲೇ ಕ್ವಾರಂಟೈನ್ ನಲ್ಲಿ ಇದ್ದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋವನ್ನು ಶೇರ್ ಮಾಡಿದ್ದಾರೆ ಹಾಗೂ ತನ್ನ ಕ್ವಾರಂಟೈನ್ ಲೈಫ್ ನ ವಿಷಯವಾಗಿ ಫ್ಯಾನ್ಸ್ ಗಳಿಗೆ ತಿಳಿಸಿದ್ದಾರೆ.


ಅರ್ಜುನ್ ಪೋಸ್ಟ್ ನಲ್ಲಿ ಯಾವ ಫೋಟೋವನ್ನು ಶೇರ್ ಮಾಡಿದ್ದಾರೋ ಅದರಲ್ಲಿ ಅವರು ಕ್ಯಾನ್ವಾಸಿನಲ್ಲಿ ಪೇಂಟಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಇದರ ಕ್ಯಾಪ್ಟನ್ ನಲ್ಲಿ ಅವರು ಬರೆದಿದ್ದಾರೆ- ’ಕ್ವಾರಂಟೈನ್ ಲೈಫ್ ಡೇ- ೪’ ಎಂದು. ಅರ್ಜುನ್ ಕ್ವಾರಂಟೈನ್ ಎರಡನೇ ದಿನದಂದು ಪುಸ್ತಕಗಳ ಜೊತೆ ಕಳೆದಿದ್ದರಂತೆ. ಪುಸ್ತಕ ಓದುತ್ತಿದ್ದಾಗಲೂ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅವರು ತಾನು ಕೋವಿಡ್ ಪಾಸಿಟಿವ್ ಆಗಿರುವುದನ್ನು ಕೂಡ ಸೋಶಿಯಲ್ ಮೀಡಿಯಾದಲ್ಲೇ ಶೇರ್ ಮಾಡಿದ್ದರು.

ಅನಿಲ್ ಕಪೂರ್ ಲಸಿಕೆಯ ಎರಡನೇ ಡೋಸ್ ಚುಚ್ಚಿಸಿದರು: ಅಪ್ಪನ ಬಗ್ಗೆ ಮಗ ಹೀಗೆ ತಮಾಷೆ ಮಾಡಿದರು- ’೪೫ ವರ್ಷಕ್ಕಿಂತ ಕೆಳಗಿನವರು ಹೇಗೆ ಲಸಿಕೆ ಪಡೆದಿರಿ!’

ಕೊರೊನಾ ವೈರಸ್ಸಿನ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ೪೫ ವರ್ಷಕ್ಕಿಂತ ಮೇಲ್ಪಟ್ಟವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅನುಮತಿ ಸಿಕ್ಕಿದೆ. ಈ ನಡುವೆ ನಟ ಅನಿಲ್ ಕಪೂರ್ ವ್ಯಾಕ್ಸಿನ್ ನ ಎರಡನೇ ಡೋಸ್ ಚುಚ್ಚಿಸಿಕೊಂಡರು .
ಅನಿಲ್ ಕಪೂರ್ ವ್ಯಾಕ್ಸಿನ್ ನ ಎರಡನೇ ಡೋಸ್ ಚುಚ್ಚಿಸಿಕೊಂಡ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಅವರ ಅಭಿಮಾನಿಗಳು ಪ್ರಶಂಸೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ .


ಈಗ ಅವರ ಮಗ ಕೂಡ ತನ್ನ ತಂದೆಯವರ ಬಗ್ಗೆ ತಮಾಷೆಯ ಕಮೆಂಟ್ ಮಾಡಿದ್ದಾರೆ.-
“ಸರಕಾರಿ ನಿರ್ದೇಶನದ ಅನುಸಾರ ಸದ್ಯ ೪೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್ ಚುಚ್ಚಿಸಿಕೊಳ್ಳಬೇಕು. ಮೇ ಒಂದರ ನಂತರವೇ ೧೮ ವರ್ಷಕ್ಕಿಂತ ಮೇಲ್ಪಟ್ಟವರು ವ್ಯಾಕ್ಸಿನ್ ಚುಚ್ಚಿಸಿಕೊಳ್ಳಬಹುದು. ನೀವಿನ್ನೂ ಯಂಗ್ ಇದ್ದೀರಿ. ಹಾಗಿರುವಾಗ ವ್ಯಾಕ್ಸಿನ್ ಹೇಗೆ ಚುಚ್ಚಿಸಿ ಕೊಂಡಿರಿ? ೪೫ ವರ್ಷಕ್ಕಿಂತ ಕೆಳಗಿನವರು ಮೇ ಒಂದರ ನಂತರವೇ ವ್ಯಾಕ್ಸಿನ್ ಚುಚ್ಚಿಸಿಕೊಳ್ಳಬೇಕು ಅಲ್ಲವೇ?” ಎಂದು ತಂದೆ ಅನಿಲ್ ಕಪೂರ್ ಗೆ ಮಗ ಹರ್ಷವರ್ಧನ್ ಕಪೂರ್ ತಮಾಷೆ ಮಾಡಿದ್ದಾರೆ.


ಅನೇಕ ಬಾಲಿವುಡ್ ಗಣ್ಯರು ಕೂಡ ಅನಿಲ್ ಕಪೂರ್ ರ ವ್ಯಾಕ್ಸಿನ್ ಫೋಟೋಗೆ ಕಮೆಂಟ್ ಮಾಡಿದ್ದಾರೆ.
“ಮೇ ಒಂದಕ್ಕಿಂತ ಮೊದಲು ಹೇಗೆ ಲಸಿಕೆ ಪಡೆದಿರಿ?” ಎಂದು ಇನ್ನೂ ಕೆಲವು ಬಾಲಿವುಡ್ ಗಣ್ಯರು ಹರ್ಷವರ್ಧನ್ ರ ಮಾತನ್ನು ಎತ್ತಿಹಿಡಿದಿದ್ದಾರೆ.
ಈ ನಡುವೆ ಅನಿಲ್ ಕಪೂರ್ ಕೂಡಾ ತಮಾಷೆಯ ಮಾತು ಪೋಸ್ಟ್ ಮಾಡಿದ್ದಾರೆ- “ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ನನ್ನ ಬರ್ತ್ ಡೇಟ್ ಇಲ್ಲದಿದ್ದರೆ ಮೇ ಒಂದರ ನಂತರವೇ ಬನ್ನಿ ಎಂದು ನನ್ನನ್ನು ಅಲ್ಲಿಂದ ಹೊರಗಡೆ ಕಳುಹಿಸುತ್ತಿದ್ದರೋ ಏನೋ! “